HomePage_Banner
HomePage_Banner
Breaking News

ಕನ್ನಡ ರಾಜ್ಯೋತ್ಸವ: ಕನ್ನಡದ ದೀಪ ಹಚ್ಚೋಣ ಕನ್ನಡಾಂಬೆಗೆ ನಮಿಸೋಣ

ಕನ್ನಡ ನಾಡಿಗೆ ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಅನೇಕ ರಾಜ ಮಹಾರಾಜರು ಕನ್ನಡ ನಾಡಿನಲ್ಲಿ ವೈಭವದಿಂದ ಆಳ್ವಿಕೆ ನಡೆಸಿದ್ದಾರೆ. ಕನ್ನಡ ನಾಡು ಕಲೆ, ಸಾಹಿತ್ಯ, ಶೌರ್ಯಕ್ಕೆ ಹೆಸರಾದ ನಾಡು.
ಸಾಹಿತ್ಯಕವಾಗಿ ರನ್ನ, ಪಂಪ, ಹರಿಹರ, ರಾಘವಾಂಕ, ಬಸವಣ , ಪ್ರಭುದೇವ, ಲಕ್ಷ್ಮೀಶ, ಕುಮಾರವ್ಯಾಸರ ಪ್ರಸಿದ್ಧ ನಾಡಿದು. ದಾಸ ಶ್ರೇಷ್ಠರಾದ ಪುರಂದರದಾಸರು, ಕನಕದಾಸರಂತಹ ಭಕ್ತಿ ಪಂಥದ ದಿಗ್ಗಜರ ನಾಡಿದು ಆಧುನಿಕ ಕಾಲದ ಬೇಂದ್ರೆ, ಕುವೆಂಪು, ಶಿವರಾಮಕಾರಂತರವರ ಖ್ಯಾತ ಸಾಹಿತಿಗಳ ಜನ್ಮ ಭೂಮಿ ಇದಾಗಿದೆ. ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವವನ್ನು ಪ್ರತೀ ವರ್ಷ ನವಂಬರ್ ೧ರಂದು ಆಚರಿಸಲಾಗುತ್ತಿದೆ. ಬ್ರಿಟಿಷರ ಆಳ್ವಿಕೆಂi ಕಾಲದಲ್ಲಿ ಕನ್ನಡ ನಾಡು ಬೊಂಬಾಯಿ, ಹೈದರಾಬಾದ್, ಹಾಗೂ ಮದರಾಸು ಪ್ರಾಂತ್ಯಗಳಲ್ಲಿ ಹಂಚಿಹೋಗಿತ್ತು. ಸ್ವಾತಂತ್ರ್ಯ ಹೋರಾಟದೊಂದಿಗೆ ಕರ್ನಾಟಕ ಏಕೀಕರಣ ಹೋರಾಟ ಪ್ರಾರಂಭವಾಯಿತು. ೧೯೨೪ ರಲ್ಲಿ ನಡೆದ ಬೆಳಗಾವಿ ಕಾಂಗ್ರೇಸ್ ಅಧಿವೇಶನದಲ್ಲಿ ಇದಕ್ಕೆ ಮಹತ್ವ ದೊರೆಯಿತು. ಸಹಸ್ರಾರು ಜನಗಳು, ಕವಿಗಳು, ಲೇಖಕರು, ಪರ್ತ್ರಕರ್ತರು ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಸಿದ್ದಾರೆ, ಅಭಿಮಾನ ಮೂಡಿಸಿದ್ದಾರೆ. ಅವರಲ್ಲಿ ಮೊದಲಿಗರು ಆಲೂರು ವೆಂಕಟರಾಯರು ಒಬ್ಬರು ಕರ್ನಾಟಕ ಏಕೀಕರಣ ಚಳುವಳಿಯನ್ನು ೧೯೦೫ರಲ್ಲಿ ಪ್ರಾರಂಭಿಸಿದರು. ೧೯೫೦, ಜನವರಿ ೨೬, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳ ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡಿತ್ತು. ಕರ್ನಾಟಕ ಏಕೀಕರಣ ಮೂರು ಹಂತಗಳಲ್ಲಿ ಆರಂಭವಾಯಿತು. ಹಲವಾರು ಮಂದಿ ಏಕೀಕರಣಕ್ಕಾಗಿ ಸತ್ಯಾಗ್ರಹ ನಡೆಸಿ ಸೆರೆಮನೆ ಸೇರಿದರು. ಕೇಂದ್ರ ಸರ್ಕಾರವು ರಾಜ್ಯ ಪುನರ್ ವಿಂಗಡಣಾ ಆಯೋಗವನ್ನು ನೇಮಿಸಿ ಇದಕ್ಕಾಗಿ ಸಮಿತಿ ರಚನೆಯಾಯಿತು. ೧೯೫೫ರಲ್ಲಿ ಆಯೋಗವು ವರದಿಯನ್ನು ಸಲ್ಲಿಸಿತು. ಕೇಂದ್ರ ಸರ್ಕಾರವು ಆಯೋಗದ ವರದಿಯನ್ನು ಒಪ್ಪಿದರಿಂದ ೧೯೫೬ರಲ್ಲಿ ರಾಜ್ಯ ಪುನರ್ ವಿಂಗಡಣಾ ಕಾಯಿದೆ ಪ್ರಕಾರ ಭಾಷಾವಾರು ಪ್ರಾಂತ್ಯಗಳು ರಚನೆಯಾಗಿ ಮೈಸೂರು ರಾಜ್ಯ ೧೯೫೬, ನವೆಂಬರ್ ೧ರಂದು ಉದಂi ವಾಯಿತು. ಕನ್ನಡಿಗರು ಈ ದಿನವನ್ನು ನಾಡಿನ ಹಬ್ಬವನ್ನಾಗಿ ಆಚರಿಸುತ್ತಾರೆ. ಕನ್ನಡ ರಾಜ್ಯೋತ್ಸವವನ್ನು ಎಲ ರೂ ಜಾತಿ, ಮತ, ಧರ್ಮ, ಬೇದವಿಲ್ಲದೆ ಆಚರಿಸುತ್ತಾರೆ. ವಿಶಾಲ ಮೈಸೂರು ರಾಜ್ಯಕ್ಕೆ ಎಸ್ ನಿಜಲಿಂಗಪ್ಪನವರು ಪ್ರಥಮ ಮುಖ್ಯ
ಮಂತ್ರಿಗಳಾದರು. ಮುಂದೆ ೧-೧೧-೧೯೭೩ ರಲ್ಲಿ ವಿಶಾಲ ಮೈಸೂರು ರಾಜ್ಯಕ್ಕೆ “ಕರ್ನಾಟಕ” ಎಂಬ ನಾಮಕರಣ ಮಾಡಲಾಯಿತು. ಅಂದಿನ ಮುಖ್ಯಮಂತ್ರಿಗಳಾದ ದೇವರಾಜ ಅರಸರ ನೇತೃತ್ವದಲ್ಲಿ ಕರ್ನಾಟಕ ನಾಮಕರಣ ಮಹೋತ್ಸವವು ಹಂಪೆಯಲ್ಲಿ ಆಚರಿಸಲಾಗಿತ್ತು.
ಕನ್ನಡ ನಾಡು ಕೈಗಾರಿಕೆ, ಶಿಲ್ಪಕಲೆ, ಚಿತ್ರಕಲೆ, ಸಂಗೀತ, ಸಾಹಿತ್ಯ, ತ್ಯಕಲೆ, ಕ್ಷೇತ್ರಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಐತಿಹಾಸಿಕ ಕ್ಷೇತ್ರಗಳು, ಧಾರ್ಮಿಕ ತಾಣಗಳು, ಂi iತ್ರಿಕರ ಆಕರ್ಷಣೀಯ ಕೇಂದ್ರವಾಗಿದೆ. ಕನ್ನಡ ಆಡಳಿತ ಭಾಷೆಯಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದೆ. ಇಲ್ಲಿನ ಜನಪದ ವೈವಿಧ್ಯಮಂi ವಾಗಿದೆ. ಇಲ್ಲಿರುವ ಶ್ರೇಷ್ಠ ಸಂಸ್ಕೃತಿಂi ನ್ನು ರಕ್ಷಿಸುವುದು ನಮ್ಮೆಲ ರ ಆಧ್ಯ ಕರ್ತವ್ಯವಾಗಿದೆ. ನಮ್ಮ ಅಮೂಲ್ಯ ಪರಂಪರೆಂi ನ್ನು ಗೌರವಿಸಬೇಕು. ಕರ್ನಾಟಕಕ್ಕೆ ತನ್ನ ಆದ ಸಂಸ್ಕೃತಿ ಇದೆ. “ನಮ್ಮ ಕರ್ನಾಟಕ ಶ್ರೇಷ್ಠ ಸಂಸ್ಕೃತಿ-ಪರಂಪರೆಯನ್ನು ಉಳಿಸೋಣ ಬೆಳೆಸೋಣ. ಕನ್ನಡವೇ ನಮ್ಮೆಲ ರ ಉಸಿರಾಗಲಿ, ಈ ಕನ್ನಡ ನಾಡಿನಲ್ಲಿ ನಾವೆಲ ರೂ ಪ್ರೀತಿ-ವಿಶ್ವಾಸ ಸೌಹಾರ್ದತೆಯಿಂದ ಬಾಳೋಣ, ಕನ್ನಡದ ದೀಪವ ಹಚ್ಚೋಣ ಕನ್ನಡ ಮಾತೆಗೆ ನಮಿಸೋಣ ಕರ್ನಾಟಕ ಮಾತೆಗೆ ಜಯವಾಗಲಿ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಜೈ ಕರ್ನಾಟಕ ಮಾತೆ 

ಲೇಖನ: ಕೋಟಿಯಪ್ಪ ಪೂಜಾರಿ ಸೇರ
ಎಂ.ಎ.ಬಿ.ಎಡ್

 

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.