Breaking News

ಸಂಚಾರ ನಿಯಂತ್ರಕ ರಾಧಾಕೃಷ್ಣ ಕೋಡಿರವರಿಗೆ ನಿವೃತ್ತಿ

Advt_Headding_Middle
Advt_Headding_Middle

ಸುಳ್ಯ ಬಸ್ ನಿಲ್ದಾಣದಲ್ಲಿ ಸಂಚಾರ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಿದ್ದು ಅರಂತೋಡು ಗ್ರಾಮದ ಕೋಡಿ ರಾಧಾಕೃಷ್ಣ ಕೆ.ವಿ ರವರಿಗೆ ಸೇವಾನಿವೃತ್ತಿಯಾಗಿದ್ದು ಅವರಿಗೆ ಬೀಳ್ಕೋಡುಗೆ ಸಮಾರಂಭವು ಅ.31 ರಂದು ಸುಳ್ಯದ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಘಟಕ ವ್ಯವಸ್ಥಾಪಕರಾದ ಸುಂದರರಾಜ್, ಪ್ರಭಾರ ಡಿಪೋ ಮೆನೇಜರ್ ವಸಂತ ನಾಯ್ಕ ,ಸಂಚಾರ ನಿರೀಕ್ಷಕರಾದ ಪದ್ಮನಾಥನ್ ,ಭದ್ರತಾ ಹವಾಲ್ದಾರ್ ಗಣೇಶ್ ಪ್ರಭು,ಸಂಚಾರ ನಿಯಂತ್ರಕರಾದ ಕರುಣಾಕರ ಕರ್ಲಪ್ಪಾಡಿ, ಹರೀಶ್ಚಂದ್ರ ಮೇಲಡ್ತಲೆ,ಸಾಂತಪ್ಪ ಗೌಡ ಜಟ್ಟಿಪಳ್ಳ , ಮಹಾಲಿಂಗೇಶ್ವರ ಭಟ್ ,ಗೋಪಾಲ್ ಈಶ್ವರಡ್ಕ ಹಾಗೂ ಕೆ.ಎಸ್.ಆರ್.ಟಿ ಸಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ರಾಧಾಕೃಷ್ಣ ರವರು1984 ರಲ್ಲಿ ಕೆ.ಎಸ್.ಆರ್.ಟಿ.ಸಿ ಗೆ ಸೇರ್ಪಡೆಗೊಂಡು ೪ ವರ್ಷ ಬೆಂಗಳೂರಿನಲ್ಲಿ ಬಿ.ಟಿ.ಸಿ ನಿರ್ವಾಹಕ ರಾಗಿದ್ದು, 30 ವರ್ಷ ಪುತ್ತೂರಿನಲ್ಲಿ ಸಂಚಾರ ನಿಯಂತ್ರಕರಾಗಿಯೂ,ನಿರ್ವಾಹಜರಾಗಿಯೂ ಸೇವೆ ಸಲ್ಲಿಸಿದ್ದರು. ನಂತರ ಒಂದೂವರೆ ವರ್ಷ ಹಿಂದೆ ಸುಳ್ಯಕ್ಕೆ ವರ್ಗಾವಣೆಯಾಗಿ ಬಂದು ಸುಳ್ಯ ವಿಭಾಗದ ಸಂಚಾರ ನಿಯಂತ್ರಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಇವರ ಪತ್ನಿ ಶ್ರೀಮತಿ ಲತಾ ಗೃಹಿಣಿಯಾಗಿದ್ದು,ಪುತ್ರ ರಾಜೀವ ಬೆಂಗಳೂರಿನ ಹುಂಡೈ ಕಂಪನಿಯ ಲ್ಲಿ ಅಸಿಸ್ಟೆಂಟ್ ಮೆನೇಜರ್ ರಾಗಿದ್ದಾರೆ.ಪುತ್ರಿಯರಾದ ಶ್ರೀಮತಿ ದಿವ್ಯ ರವರು ಜಮ್ಮುವಿನಲ್ಲಿ ಸುಬೇದಾರ್ ಮೇಜರ್ ಆಗಿರುವ ಕಿರಣ್ ರನ್ನು ವಿವಾಹವಾಗಿ ಜಮ್ಮುವಿನಲ್ಲಿ ನೆಲೆಸಿದ್ದಾರೆ.ಕು.ಶ್ವೇತ ರವರು ಫ್ಯಾಶನ್ ಡಿಸೈನರ್ ಆಗಿ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.