HomePage_Banner
HomePage_Banner
Breaking News

ವಿಶ್ವ ಯುವಕ ಮಂಡಲ ಬಾಳುಗೋಡು ನೂತನ ಪಧಾದಿಕಾರಿಗಳ ಆಯ್ಕೆ

ವಿಶ್ವ ಯುವಕ ಮಂಡಲ ಬಾಳುಗೋಡು ಇದರ ವಾರ್ಷಿಕ ಮಹಾಸಭೆಯು ನ. 11 ರಂದು ಯುವಕ ಮಂಡಲದ ಗೌರವ ಅಧ್ಯಕ್ಷ ವಸಂತ ಕುಮಾರ್ ಕಿರಿಭಾಗರವರ ಅಧ್ಯಕ್ಷತೆಯಲ್ಲಿ ಸ.ಹಿ.ಪ್ರಾ.ಶಾಲೆ ಬಾಳುಗೋಡಿನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು ಅಧ್ಯಕ್ಷರಾಗಿ ರಾಧಾಕೃಷ್ಣ ಕಟ್ಟೆಮನೆ,ಉಪಾಧ್ಯಕ್ಷರಾಗಿ ಜಯಂತ ಬಾಳುಗೋಡು,ಕಾರ್ಯದರ್ಶಿಯಾಗಿ ಉಲ್ಲಾಸ್ ಮುಚ್ಚಾರ, ಜತೆಕಾರ್ಯದರ್ಶಿಯಾಗಿ ಗಣೇಶ್ ಬಾಳುಗೋಡು, ಕೋಶಾಧಿಕಾರಿಯಾಗಿ ಭರತ್ ಕಿರಿಭಾಗ, ಕ್ರೀಡಾ ಕಾರ್ಯದರ್ಶಿಯಾಗಿ ನಿರನ್ ಬಾಳುಗೋಡು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಯತಿರಾಜ್ ಪದಕ, ಮಾಧ್ಯಮ ಪ್ರತಿನಿಧಿಯಾಗಿ ಲೋಹಿತ್ ಮುಚ್ಚಾರ ಇವರನ್ನು ಸರ್ವಾನುಮತಗಳಿಂದ ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ಪೂರ್ವಾಧ್ಯಕ್ಷ ಶಿಶಿರ್ ಕಟ್ಟೆಮನೆ, ಹರಿಹರ ಪಲ್ಲತ್ತಡ್ಕ ಗ್ರಾ.ಪಂ ಸದಸ್ಯರಾದ ಯಶವಂತ ಬಾಳುಗೋಡು,ಯುವಕ ಮಂಡಲದ ಗೌರವ ಸಲಹೆಗಾರರಾದ ಜಯರಾಮ ಆಲ್ಕಬೆ ಮತ್ತು ಡಾ.ಸೋಮಶೇಖರ್ ಕಟ್ಟೆಮನೆ ಉಪಸ್ಥಿತರಿದ್ದರು.

ತೇಜಕುಮಾರ್ ತಳೂರು ಆಯವ್ಯಯ ಪಟ್ಟಿಯನ್ನು ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.