HomePage_Banner
HomePage_Banner

ಆಲೆಟ್ಟಿ : ತೃಪ್ತಿ ಸ್ತ್ರೀ ಶಕ್ತಿ ಗೊಂಚಲು ಸಭೆ

ಆಲೆಟ್ಟಿಯ ತೃಪ್ತಿ ಸ್ತ್ರಿ ಶಕ್ತಿ ಗೊಂಚಲು ಸಭೆಯು ನ.11 ರಂದು ಶ್ರೀಮತಿ ಸವಿತರ ಅಧ್ಯಕ್ಷತೆಯಲ್ಲಿ ಆಲೆಟ್ಟಿ ಸಿ.ಎ.ಬ್ಯಾಂಕ್ ಸಭಾಭವನದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ದಿನಾಚರಣೆ, ಐಸಿಡಿಎಸ್ ದಿನಾಚರಣೆ, ಗಾಂಧಿ ಜಯಂತಿ ಹಾಗೂ ಪೋಣಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆಲೆಟ್ಟಿ ಗ್ರಾ.ಪಂ.ಅಧ್ಯಕ್ಷ ಕೆ.ಜೆ.ಹರೀಶ್‌ರವರು ಉದ್ಘಾಟಿಸಿದರು. ಹಿರಿಯ ನಾಗರಿಕರನ್ನು ನಾವು ಪ್ರೀತಿಯಿಂದ ಗೌರವಿಸಿ, ಹಿರಿಯರು ನಮಗೆಲ್ಲರಿಗೂ ದಾರಿದೀಪ ಅವರನ್ನು ಎಂದೂ ಕಡೆಗಣಿಸಬಾರದು ಎಂದು ಹೇಳಿದರು. ತದನಂತರ ಪಿ.ಡಿ.ಒ.ರತ್ನಾವತಿ ವಾಲ್ತಾಜೆಯವರು ಹಿರಿಯ ನಾಗರಿಕರ ಕುರಿತಾಗಿ ಮಾತಾನಾಡಿದರು.
ಹಿರಿಯ ನಾಗರಿಕರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದ ಎಲ್ಲರಿಗೂ ಒಕ್ಕೂಟದ ವತಿಯಿಂದ ಬಹುಮಾನಗಳನ್ನು ನೀಡಲಾಯಿತು. ನಂತರ ದೇವಮ್ಮ, ಗೌರಿಯವರು ಸಭೆಯಲ್ಲಿ ಮಾತನಾಡಿದರು.ಬಟ್ಟೆ ಚೀಲಗಳನ್ನು ಹೊಲಿದು ತಯಾರಿಸಲಾಯಿತು.
ಗ್ರಾ.ಪಂ.ಉಪಾದ್ಯಕ್ಷೆ ಸುಂದರಿಯವರು ಮಾತನಾಡಿ, ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಯಾರೂ ಬಳಸದೆ ಬಟ್ಟೆಚೀಲಗಳನ್ನು ಹಿಡಿದು ಗ್ರಾಮಕ್ಕೆ ನಾವು ಮಾದರಿಯಾಗಿ ನಿಲ್ಲುವ ಎಂದು ಹೇಳಿದರು.
ಸುಮತಿ, ಪುಷ್ಪಾವತಿ ಪ್ರಾರ್ಥಿಸಿ, ಉಷಾ ಸ್ವಾಗತಿಸಿ, ಗೊಂಚಲಿನ ಕಾರ್ಯದರ್ಶಿ ಶ್ರೀಮತಿ ರಾಜೀವಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.