HomePage_Banner
HomePage_Banner
HomePage_Banner
HomePage_Banner

ಕುಮಾರಸ್ವಾಮಿ ವಿದ್ಯಾಸಂಸ್ಥೆಯಲ್ಲಿ ಮೆಟ್ರಿಕ್ ಮೇಳ

ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ಮೆಟ್ರಿಕ್ ಮೇಳ ಬುಧವಾರ ನಡೆಯಿತು. ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ತಂದ ವಿವಿಧ ಬಗೆಯ ತಾಜಾ ತರಕಾರಿ, ಹಣ್ಣು ಹೂವು ವಿವಿಧ ರೀತಿಯ ಗಿಡಗಳನ್ನು ಶಾಲಾ ಆವರಣದಲ್ಲಿ ವ್ಯಾಪಾರ ಮಾಡಿ ಕೈ ತುಂಬ ಹಣ ಗಳಿಸಿದರು. ಶಾಲಾ ಆವರಣ ಸಂತೆ ಮಾರುಕಟ್ಟೆಯಾಗಿ ಮಾರ್ಪಟ್ಟಿತು. ವಿದ್ಯಾರ್ಥಿಗಳು ವ್ಯಾಪಾರಿಗಳಾದರೆ ಶಿಕ್ಷಕರು, ಪೋಷಕರು ಸಾರ್ವಜನಕರು ಗ್ರಾಹಕರಾಗಿ ಆಗಮಿಸಿ ಖರೀದಿಯಲ್ಲಿ ತೊಡಗಿದ್ದರು.
ಹಣ್ಣಿನ ರಸ, ತರಕಾರಿಗಳು, ಹಣ್ಣಿನ ಗಿಡಗಳು,, ಹೂವು ವ್ಯಾಪಾರ, ಚುರುಮುರಿ, ಮನೆಯಲ್ಲಿ ತಯಾರಿಸಿದ ತಿಂಡಿ, ಉಪ್ಪಿನಕಾಯಿ ಮೊದಲಾದುವುಗಳ ಭರ್ಜರಿ ವ್ಯಾಪಾರ ನಡೆಯಿತು, ಬೆಳಗ್ಗೆ ಸಂತೆ ಆರಂಭಗೊಂಡ ಹೊತ್ತಿನಿಂದಲೆ ಭರ್ಜರಿ ವ್ಯಾಪಾರ ನಡೆಯಿತು. ಈ ಭಾರಿ ಪೋಷಕರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಗೆ ಬಂದಿದ್ದರು. ಮಧ್ಯಾಹ್ನ ವೇಳೆಗೆ ಎಲ್ಲ ಸ್ಟಾಲುಗಳಲ್ಲಿ ವಸ್ತುಗಳು ಖಾಲಿಯಾದವು. ಪ್ರೌಡಶಾಲಾ ವಿಭಾಗದಿಂದ ೪೪ ಹಾಗೂ ಪ್ರಾಥಮಿಕ ಶಾಲಾ ವಿಭಾಗದಿಂದ ೩೭ ಸ್ಟಾಲುಗಳನ್ನು ತೆರೆಯಲಾಗಿತ್ತು. ಅತ್ಯಲ್ಪ ಅವಧಿಯಲ್ಲಿ ೭೦.೦೦೦ ರೂ ವ್ಯವಹಾರ ನಡೆದಿದೆ. ಭರ್ಜರಿ ವ್ಯಾಪರದಿಂದ ಮಕ್ಕಳು ಪುಲ್ ಖುಷಿಗೊಂಡಿದ್ದರು.ಸದಾ ಓದು ಪಾಠ, ಆಟದಲ್ಲಿ ತಲ್ಲೀನರಾಗುತ್ತಿದ್ದ ವಿ ವಿದ್ಯಾರ್ಥಿಗಳು ಶಾಲಾ ಆವರಣದ ಉದ್ದಕ್ಕೂ ಸ್ಟಾಲ್ ಹಾಕಿ ಮನೆಯಿಂದ ತಂದ ಚೀನಿಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಕುಂಬಳಕಾಯಿ, ಪಡುವಲಕಾಯಿ , ಬಾಳೆಹಣ್ಣು, ಹರಿವೆ ಸೊಪ್ಪು, ಹಸಿಮೆಣಸು, ಟೊಮೆಟೋ , ಸಿಹಿ ಗೆಣಸು, ಬಸಳೆ ಎಳನೀರು, ಕೊಕ್ಕೋ, ವೀಳ್ಯದೆಲೆ, ತೆಂಗಿನ ಕಾಯಿ, ಕಬ್ಬು, ಸೀಬೆಕಾಯಿ, ಪರಂಗಿಹಣ್ಣು, ಚಿಕ್ಕು, ಪಪ್ಪಾಯಿ, ಕಲ್ಲಂಗಡಿ, ಔಷಧಿ ಸಸ್ಯ, ಹೂವಿನ ಗಿಡ, ತಾಳೆಹಣ್ಣು, ಗುಲಾಬಿ ಮಲ್ಲಿಗೆ, ಅರಶಿನ ನಿಂಬೆ, ಬದನೆ, ಹಣ್ಣುಗಳಾದ ಕಿತ್ತಾಳೆ, ಚಕ್ಕೋತ ಮೊದಲಾದುವುಗಳನ್ನು ಮಾರಾಟ ಮಾಡಿ ನೂರಾರು ರೂಪಾಯಿ ಜೇಬಿಗಿಳಿಸಿಕೊಂಡರು.
ಮಕ್ಕಳ ಸಂತೆಯಲ್ಲಿ ಮನೆಗಳಲ್ಲಿ ಬೆಳೆದ ಸಾವಯನ ತರಕಾರಿಗಳನ್ನೆ ಮಾರಾಟಕ್ಕೆ ಇಡಲಾಗಿತ್ತು. ಅಂಗಡಿಯಿಂದ ಖರೀದಿಸಿ ತರದಂತೆ ಮಕ್ಕಳಿಗೆ ಶಿಕ್ಷಣ ಸಂಸ್ಥೆ ಮುಖ್ಯಸ್ಥರಿಂದ ಸೂಚನೆ ನೀಡಲಾಗಿತ್ತು. ಮನೆಯಲ್ಲಿ ಸಿದ್ಧಪಡಿಸಿದ ತಿಂಡಿ ತಿನಿಸುಗಳನ್ನು ಮಾರಾಟಕ್ಕೆ ಇರಿಸಿದ್ದರು.
ಶಿಕ್ಷಣದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಕ್ಕಳಿಗೆ ವ್ಯಾಪಾರ ಮಾಡುವ ಕಲೆಯನ್ನು ಎಳವೆಯಲ್ಲಿ ಕರಗತ ಮಾಡುವ ಪ್ರಯತ್ನದ ಸಲುವಾಗಿ ಶಾಲಾ ಆಡಳಿತ ಮಂಡಳಿ, ಶಿಕ್ಷಕ ರಕ್ಷಕ ಸಂಘ, ಶಾಲಾ ಶಿಕ್ಷಕ ವೃಂದ ವರ್ಷಕ್ಕೊಮ್ಮೆ ಈ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಲ್ಲಿ ವಿಶೇಷ ಅನುಭವವನ್ನು ಭಿತ್ತಿದರು.
ಮೆಟ್ರಿಕ್ ಮೇಳವನ್ನು ಸುಬ್ರಹ್ಮಣ್ಯ ಗ್ರಾ.ಪಂ ಪಿಡಿಒ ಮುತ್ತಪ್ಪ ಉದ್ಘಾಟಿಸಿದರು. ಗ್ರಾ.ಪಂ ಕಾರ್ಯದರ್ಶಿ ಮೋನಪ್ಪ ಡಿ, ಸಂಸ್ಥೆಯ ಸಂಚಾಲಕ ಗಣೇಶ್ ಪ್ರಸಾದ್, ಚಂದ್ರಶೇಖರ ನಾಯರ್, ಮುಖ್ಯ ಶಿಕ್ಷಕಿ ವಿದ್ಯಾರತ್ನ ಉಪಸ್ಥಿತರಿದ್ದರು. ಶಿಕ್ಷಕವೃಂದ, ಪೋಷಕರು ಹೆಚ್ಚು ಪ್ರಮಾಣದಲ್ಲಿ ಭಾಗವಹಿಸಿ ವಸ್ತುಗಳನ್ನು ಖರೀದಿಸಿದರು.
ವ್ಯಾಪಾರ ಮನೋಭಾವ ಉದ್ದೇಶ
ಮಕ್ಕಳಲ್ಲಿ ವ್ಯಾಪಾರ ಮನೋಭಾವ ಬೆಳೆಯಬೇಕು. ವ್ಯಾಪಾರ ವ್ಯವಹಾರ eನ ಬೆಳೆಸಿಕೊಂಡಲ್ಲಿ ಮುಂದೆ ಅದು ಉಪಯೋಗಕ್ಕೆ ಬರುತ್ತದೆ. ಈ ಉದ್ದೇಶ ಇರಿಸಿಕೊಂಡು ಎಳವೆಯಲ್ಲೆ ಮಕ್ಕಳಲ್ಲಿ ಕೆಲ ಅನುಭವಗಳನ್ನು ಬಿತ್ತುವ ಉದ್ದೇಶದಿಂದ ಮೆಟ್ರಿಕ್ ಮೇಳವನ್ನು ಆಯೋಜಿಸಿದ್ದೆವು
ಗಣೇಶ್ ಪ್ರಸಾದ್ ಸಂಚಾಲಕರು. ಶಿಕ್ಷಣ ಸಂಸ್ಥೆ
eನವೃದ್ಧಿಗೆ ಸಹಾಯವಾಯಿತು.
ಪೇಟೆಯಲ್ಲಿ ಸಂತೆಯಲ್ಲಿ ಖರೀದಿ ಮಾಡುವುದನ್ನು ನೋಡಿದ್ದೆ. ಇವತ್ತು ಸ್ವತ: ಅನುಭವ ಆಯಿತು. ವ್ಯಾಪಾರ ನಡೆಸುವುದು ಎಂದರೆ ಅದರಲ್ಲಿ ಖುಷಿಯ ಅನುಭವಿದೆ. ವಿದ್ಯೆಯೊಂದಿಗೆ ವ್ಯಾಪಾರ ವಹಿವಾಟಿನ eನ ವೃದ್ಧಿಗೆ ಇದು ಸಹಕಾರಿಉ ಆಯಿತು.
ಲಕ್ಷ್ಕ ಚೌಹಾಣ್ ಆರನೆ ತರಗತಿ ವಿದ್ಯಾರ್ಥಿನಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.