HomePage_Banner
HomePage_Banner
Breaking News

ಪಂಜ: ಅಕ್ರಮವಾಗಿ ಮರದ ದಿಮ್ಮಿ ಸಾಗಾಟ ಪತ್ತೆ ; ಟಿಪ್ಪರ್-ಬೊಲೋರೊ ವಾಹನ 9 .ಲಕ್ಷ ರೂ. ನ ಸೊತ್ತು ವಶ

ಅಕ್ರಮವಾಗಿ ಮರದ ದಿಮ್ಮಿ ಸಾಗಟ ಮಾಡುತ್ತಿದ್ದ ಟಿಪ್ಪರ್ ಮತ್ತು ಬೊಲೋರೋ ವಾಹನಪತ್ತೆ ಹಚ್ಚಿ ವಶಕ್ಕೆ ಪಡೆದು ಕೇಸು ದಾಖಲಿಸಿ ಕೊಂಡ ಪ್ರಕರಣ ಪಂಜದಿಂದ ವರದಿಯಾಗಿದೆ.


ಪಂಜ ಅರಣ್ಯ ಇಲಾಖೆ ವ್ಯಾಪ್ತಿಯ ಸುಬ್ರಹ್ಮಣ್ಯ -ಪಂಜ ರಸ್ತೆಯ ಬಳ್ಪ ಗ್ರಾಮದ ಅಡ್ಡಬೈಲು ಎಂಬಲ್ಲಿ ಕಿರಲ್‌ಬೋಗಿ ಮತ್ತು ಹೆಬ್ಬಲಸು ಜಾತಿಯ ಮರದ 13  ದಿಮ್ಮಿಗಳನ್ನು ಅಕ್ರವಾಗಿ ಸಾಗಾಟ ಮಾಡುತ್ತಿದ್ದ ಟಾಟಾ ಟಿಪ್ಪರ್ ಲಾರಿ( ಕೆಎ. ೦೨ .ಡಿ. ೬೧೦೯) ಮತ್ತು ಅದಕ್ಕೆ ಬೆಂಗಾವಲಾಗಿದ್ದ ಮಹೀಂದ್ರ ಬೊಲೋರೋ (ಕೆಎ ೨೫ ಎನ್ ೬೯೭೦) ವಾಹನಗಳನ್ನ ಪತ್ತೆ ಹಚ್ಚಿ ಇಲಾಖಾ ವಶಕ್ಕೆ ತೆಗೆದುಕೊಂಡು, ಅರಣ್ಯ ಮೊಕದ್ದಮೆ ದಾಖಲಿಸಿಕೊಂಡಿರುತ್ತಾರೆ. ಟಿಪ್ಪರ್ , ಬೊಲೋರೋ ಮತ್ತು ಮರದ ದಿಮ್ಮಿ ಸೇರಿ ಸುಮಾರು ೯ ಲಕ್ಷ ರೂ.ಮೌಲ್ಯದ ಸೊತ್ತು ಇಲಾಖೆ ವಶಪಡಿಸಿಕೊಂಡಿರುತ್ತಾರೆ.ವಲಯಾರಣ್ಯಾಧಿಕಾರಿ ಗಿರೀಶ್ ಆರ್ ರವರ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆದಿದ್ದು, ಉಪವಲಯರಣ್ಯಧಿಕಾರಿಯಾದ ರವಿಪ್ರಕಾಶ್, ಅರಣ್ಯ ರಕ್ಷಕರಾದ ಸಂತೋಷ್ ಧಮ್ಮಸೂರ, ಮನೋಹರ್, ಅರಣ್ಯ ವೀಕ್ಷಕರಾದ ಗಣೇಶ್ ಹೆಗ್ಡೆ, ಮಹೇಶ್ ಕೊಳ್ಳಿ, ವಾಹನ ಚಾಲಕ ಪದ್ಮಕುಮಾರ್ ಪಾಲ್ಗೊಂಡಿರುತ್ತಾರೆ. ಟಾಟಾ ಟಿಪ್ಪರ್ ಲಾರಿ ಪುತ್ತೂರು ತಾಲೂಕಿನ ಸವಣೂರು ಮೂಲದು ಮತ್ತು ಮಹೀಂದ್ರ ಬೊಲೋರೋ ಸುಳ್ಯ ತಾಲೂಕಿನ ಬೆಳ್ಳಾರೆ ಮೂಲದು ಎನ್ನಲಾಗುತ್ತಿದೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.