HomePage_Banner
HomePage_Banner
Breaking News

ಎಸ್ಸೆಸ್ಸೆಫ್ ಗಾಂಧಿನಗರ ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ

 

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಗಾಂಧಿನಗರ ಶಾಖೆಯ ವಾರ್ಷಿಕ ಮಹಾ ಸಭೆ ನವಂಬರ್ ೧೮ರಂದು ಸುಳ್ಯ ಸುನ್ನಿ ಸೆಂಟರ್’ನಲ್ಲಿ ಶಾಖಾಧ್ಯಕ್ಷರಾದ ಆರಿಫ್ ಬುಶ್ರಾರವರ ಅಧ್ಯಕ್ಷತೆಯಲ್ಲಿ ಜರಗಿತು. ಸಯ್ಯದ್ ಝೈನುಲ್ ಆಬಿದೀನ್ ತಂಳ್ ದುಆ ನೆರೆವೇರಿಸಿದರು.

ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಮಿತಿ ಅಧ್ಯಕ್ಷರಾದ ಜುನೈದ್ ಸಖಾಫಿ ಜೀರ್ಮುಕಿ ಮಹಾಸಭೆ ಉದ್ಘಾಟಿಸಿದರು. ಎಸ್.ವೈ.ಎಸ್ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಶಮೀರ್ ಮೊಗರ್ಪಣೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಶಾಖಾ ಪ್ರ. ಕಾರ್ಯದರ್ಶಿ ಆಬಿದ್ ಕಲ್ಲುಮುಟ್ಲು ವರದಿ ವಾಚಿಸಿದರು. ಕೋಶಾಧಿಕಾರಿ ಸವಾದ್ ಮುಹಮ್ಮದ್ ಲೆಕ್ಕ ಪತ್ರ ಮಂಡಿಸಿದರು. ಸೆಕ್ಟರ್ ಸಮಿತಿ ಪ್ರ. ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ ವೀಕ್ಷಕರಾಗಿ ಆಗಮಿಸಿದರು. ಪ್ರ. ಕಾರ್ಯದರ್ಶಿ ಆಬಿದ್ ಕಲ್ಲುಮುಟ್ಲು ನೂತನ ಪ್ರ. ಕಾರ್ಯದರ್ಶಿ ಬಶೀರ್ ಕಲ್ಲುಮುಟ್ಲು ವಂದಿಸಿದರು.

ನೂತನ ಸಮಿತಿಯ ಅಧ್ಯಕ್ಷರಾಗಿ ಸಿದ್ದೀಕ್ ಬಿ.ಎ, ಪ್ರ. ಕಾರ್ಯದರ್ಶಿ ಬಶೀರ್ ಕಲ್ಲುಮುಟ್ಲು, ಕೋಶಾಧಿಕಾರಿ ನಾಫಿ ಕೆರೆಮೂಲೆ ಆಬಿದ್ ಕಲ್ಲುಮುಟ್ಲು, ಉಪಾಧ್ಯಕ್ಷರಾಗಿ ಅಕ್ರಂ ಗಾಂಧಿನಗರ, ಕಾರ್ಯದರ್ಶಿಗಳಾಗಿ ಇಲ್ಯಾಸ್ ಗುರುಂಪು, ತಶ್ರೀಫ್ ಗಾಂಧಿನಗರ, ಸದಸ್ಯರಾಗಿ ತಾಹಿರ್ ತಂಙಳ್,ಸ್ವಬಾಹ್ ಹಮೀದ್ ಬೀಜಕೊಚ್ಚಿ, ಸ್ವಾದಿಖ್ ಪಿ.ಜಿ, ಆರಿಫ್ ಬುಶ್ರಾ, ಸೈಫುದ್ದೀನ್, ನೌಶಾದ್ ಕೆರೆಮೂಲೆ, ಸವಾದ್ ಮುಹಮ್ಮದ್, ಮನ್ಸೂರ್ ಎಂ.ಟಿ,
ರಶೀದ್ ಝೈನಿ , ವಫೀಕ್ ಅಹ್ಮದ್, ಶಾಫಿ ಕಲ್ಲುಮುಟ್ಲು, ಬುಜೈರ್ ಗಾಂಧಿನಗರ, ಅಝ್ಮಾನ್ ನಾವೂರು, ಶೈಬಾನ್ ವೆಲ್ಕಂ, ರಹೀಮ್ ಫ್ಯಾನ್ಸಿ ,ಮುನಾಪರ್ ನಾವೂರು ಆಯ್ಕೆಯಾಗಿದ್ದಾರೆ.
——————–

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.