HomePage_Banner
HomePage_Banner
HomePage_Banner
HomePage_Banner

ನೆಹರು ಸ್ಮಾರಕ ಪ.ಪೂ ಕಾಲೇಜು ಅರಂತೋಡು ಪ್ರತಿಭಾ ಪುರಸ್ಕಾರ ಸಮಾರಂಭ

ನೆಹರು ಸ್ಮಾರಕ ಪ.ಪೂ ಕಾಲೇಜು ಅರಂತೋಡು ಪ್ರತಿಭಾ ಪುರಸ್ಕಾರ ಸಮಾರಂಭವು ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಮುಖ್ಯ ಭಾಷಣಗಾರರಾಗಿ ಭಾಗವಹಿಸಿದ  ಪ್ರಜ್ಞಾ ಎಜ್ಯುಕೇಶನ್ ಟ್ರಸ್ಟ್‌ನ ತರಬೇತಿ ಸಂಚಾಲಕರಾದ ಶಶಿಧರ ಎಂ.ಜೆ ಮಾತನಾಡಿ ಶುಭಹಾರೈಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಪಾಪ್ಯುಲರ್ ಎಜ್ಯುಕೇಶನ್ ಸೊಸೈಟಿ ಅರಂತೋಡು ಇದರ ಅಧ್ಯಕ್ಷ ಪಿ.ಬಿ ದಿವಾಕರ ರೈ ವಹಿಸಿದ್ದರು. ಮುಖ್ಯ ಅತಿಥಿಯಾಗಿ ತಾ.ಪಂ ಸದಸ್ಯೆ ಶ್ರೀಮತಿ ಪುಷ್ಪಾ ಮೇದಪ್ಪ, ಅರಂತೋಡು ಗ್ರಾ.ಪಂ. ಅಧ್ಯಕ್ಷ ಶ್ರೀಮತಿ ಲೀಲಾವತಿ ಕೊಡಂಕೇರಿ, ಪಠೇಲ್ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅರಂತೋಡು ಇದರ ಅಧ್ಯಕ್ಷ ಬದ್ರುದ್ದೀನ್.ಎ. ಉಪಸ್ಥಿತರಿದ್ದರು.
ಬದ್ರುದ್ದೀನ್.ಎ. ಅವರು ಕಾಲೇಜಿಗೆ ಸೋಲಾರ್ ಇನ್‌ವಾಟರ್‌ನ್ನು ಕೊಡುಗೆಯಾಗಿ ನೀಡಲು ನಿರ್ಧರಿಸಿದ ಕಾರಣ ಸಂಸ್ಥೆಯ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಕೆ.ಆರ್ ಪದ್ಮನಾಭ, ಎನ್. ನಾರಾಯಣ ಗೌಡ, ಗೋಪಾಲಕೃಷ್ಣ ಬನ, ವಿದ್ಯಾರ್ಥಿ ನಾಯಕ ಅಕ್ಷಯ, ನವೀನ್, ಗೌರವ ಉಪಸ್ಥಿತಿರಿದ್ದರು. ಕಾಲೇಜಿನ ಸಂಚಾಲಕರಾದ ಕೆ.ಆರ್. ಗಂಗಾಧರ ಸ್ವಾಗತಿಸಿದರು. ರಮೇಶ್.ಎಸ್. ವಾರ್ಷಿಕ ವರದಿ ಮಂಡಿಸಿದರು. ವೈ.ಎ.ಆನಂದ ವಂದಿಸಿದರು.
ಉಪನ್ಯಾಸಕ ಮೋಹನ್‌ಚಂದ್ರ ಎನ್.ವಿ ಮತ್ತು ಉಪನ್ಯಾಸಕಿ ಶ್ರೀಮತಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಸೀತಾರಾಮ, ಶ್ರೀಮತಿ ಕುಸುಮಾವತಿ ಹಾಗೂ ಶ್ರೀಮತಿ ಶಾಂತಿ ಬಹುಮಾನ ವರದಿ ವಾಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.