HomePage_Banner
HomePage_Banner

ಜ.17-20 ಸುಳ್ಯ ರಂಗಮನೆಯಲ್ಲಿ ರಂಗಸಂಭ್ರಮ-2019

 

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.)ಸುಳ್ಯ ಆಶ್ರಯದಲ್ಲಿ ಜನವರಿ 17 ರಿಂದ 20 ರ ವರಗೆ
ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಅಡಿಟೋರಿಯಂ ನಲ್ಲಿ ’ರಂಗ ಸಂಭ್ರಮ- 2019’ ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ ನ್ನು ಏರ್ಪಡಿಸಲಾಗಿದೆ.
ಜ.17 ರಂದು ಶಾಸಕರಾದ ಎಸ್.ಅಂಗಾರ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಉತ್ಸವದ ಉದ್ಘಾಟನೆಯನ್ನು ಖ್ಯಾತ
ಲೇಖಕಿ,ಸತ್ಯಕಾಮ ಪ್ರತಿಷ್ಠಾನ ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀಮತಿ ವೀಣಾ ಬನ್ನಂಜೆ ನೆರವೇರಿಸಲಿದ್ದಾರೆ.
ಕೆ.ವಿ.ಜಿ.ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|ಎನ್.ಎ.ಜ್ಞಾನೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ಸಾರೆ.
ಇದೇ ಸಂದರ್ಭದಲ್ಲಿ ಹಿರಿಯ ರಂಗಕರ್ಮಿ ಕೆ.ಜಿ.ಕೃಷ್ಣಮೂರ್ತಿ,ಹೆಗ್ಗೋಡು ಇವರಿಗೆ 2019 ನೇ
ಸಾಲಿನ ’ರಂಗಮನೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದು.

ಜ.20 ರಂದು ನಡೆಯುವ ಸಮಾರೋಪದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ವಹಿಸಲಿದ್ದಾರೆ.ಹಿರಿಯ ರಂಗಕರ್ಮಿ ನಟರಾಜ ಹೊನ್ನವಳ್ಳಿ ಸಮಾರೋಪ ಭಾಷಣ ಮಾಡಲಿದ್ದಾರೆ.ದ.ಕ.ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ.ಅತಿಥಿಯಾಗಿ ಭಾಗವಹಿಸಲಿದ್ದಾರೆ.ಇದೇ ಸಂದರ್ಭ ಪ್ರತಿಭಾನ್ವಿತ ಚಿತ್ರ-ಶಿಲ್ಪ ಕಲಾವಿದ ಶಿವಕುಮಾರ್ ಉಜಿರೆ ಇವರನ್ನು ಸನ್ಮಾನಿಸಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮಗಳು

ಜ.17 ರಂದು ಸಂಜೆ 6.೦೦ ರಿಂದ ಸುಜನಾ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಚೆಂಡೆ ವಾದನ,ಚಿಗುರು ತಂಡ ಬಾಪು ಪ್ರೌಢಶಾಲೆ ಬೆಂಗಳೂರು ಅಭಿನಯದ ಜಾನಪದ ನಾಟಕ ’ಮಂಟೇಸ್ವಾಮಿ ಕಥಾ ಪ್ರಸಂಗ’ ಹಾಗೂ ಜೀವಸ್ವರ ಬೆಂಗಳೂರು ತಂಡದ ಖ್ಯಾತ ಗಾಯಕರಾದ ಮಹೇಶ್ ಪ್ರಿಯದರ್ಶನ್ ಮತ್ತು ಕವಿತಾ ಉಡುಪ ಇವರಿಂದ ’ಜನಪದ ಭಾವರಂಗ ಗಾಯನ’ ; ಜ.೧೮ ರಂದು ಸಂಜೆ ೬.೪೫ ಕ್ಕೆ ನೀನಾಸಮ್ ತಿರುಗಾಟ ಹೆಗ್ಗೋಡು ಅಭಿನಯದ,ಕೆ.ವಿ.ಅಕ್ಷರ ನಿರ್ದೇಶನದ ನಾಟಕ ’ಸೇತುಬಂಧ’ , ಜ.೧೯ ರಂದು ಸಂಜೆ ೬.೪೫ ನೀನಾಸಮ್ ತಿರುಗಾಟದ,ಜೋಸೆಫ್ ಜಾನ್ ನಿರ್ಸೇಶನದ ’ಆಶ್ಚರ್ಯ ಚೂಡಾಮಣಿ’ ; ಜ.೨೦ ರಂದು ಮಾ| ಮನುಜ ನೇಹಿಗ ಪ್ರಸ್ತುತ ಪಡಿಸುವ ’ಮಣಿಪುರಿ ಸ್ಟಿಕ್ ಡ್ಯಾನ್ಸ್’ ; ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಅಭಿನಯದ,ಜೀವನ್ ರಾಂ ಸುಳ್ಯ ನಿರ್ದೇಶನದ ಕಿರುನಾಟಕ ’ಅಭಿವೃದ್ಧಿ’ ಹಾಗೂ ಚಂಪಾ ಶೆಟ್ಟಿ ಬೆಂಗಳೂರು ನಿರ್ದೇಶನದ ’ಅಮ್ಮಚ್ಚಿಯೆಂಬ ನೆನಪು’ ಚಲನಚಿತ್ರ ಪ್ರದರ್ಶನ ನಡೆಯಲಿದೆ.
ಸಮಯಕ್ಮೆ ಸರಿಯಾಗಿ ಆರಂಭವಾಗುವ ಈ ಉತ್ಸವಕ್ಕೆ ಉಚಿತ ಪ್ರವೇಶವೆಂದು ರಂಗಮನೆ ರೂವಾರಿ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.