HomePage_Banner
HomePage_Banner
HomePage_Banner
HomePage_Banner

ಆಲೆಟ್ಟಿ ಎಸ್.ಎನ್.ಜನಾರ್ಧನ ಗೌಡ ಪಿಂಡಿಬನ ನಿಧನ

ಆಲೆಟ್ಟಿ ಗ್ರಾಮದ ಪಿಂಡಿಬನ ದಿ.ಎಸ್.ಎನ್ .ದಾಸಪ್ಪ ಗೌಡ ರವರ ಪುತ್ರ ಎಸ್.ಎನ್.ಜನಾರ್ಧನ ಗೌಡರು ಜ.೯ರಂದು ನಿಧನರಾದರು.ಅವರಿಗೆ ೬೯ವರ್ಷ ವಯಸ್ಸಾಗಿತ್ತು.
ಅವರಿಗೆ ಒಂದು ವಾರದ ಹಿಂದೆ ಅನಾರೋಗ್ಯ ಕಾಡಿದ್ದು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.ಮೃತರು ಆಲೆಟ್ಟಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾಗಿ, ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷರಾಗಿ, ಮೊರಂಗಲ್ಲು ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಖಜಾಂಜಿಯಾಗಿ, ಸುಳ್ಯ ಲಯನ್ಸ್ ಕ್ಲಬ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.ಆಲೆಟ್ಟಿ ಗ್ರಾಮ ಪಂಚಾಯತ್ ಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಧಾರ್ಮಿಕ ,ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಜನಾನುರಾಯಿಯಾಗಿದ್ದರು. ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು. ತನ್ನ ಉನ್ನತ ವ್ಯಾಸಂಗ ಮುಗಿಸಿದ ನಂತರ ಎಲ್.ಎಲ್.ಬಿ.ಪದವಿಧರರಾಗಿ ನ್ಯಾಯವಾದಿಯಾಗಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು.ಮೃತರು ಪತ್ನಿ ಶ್ರೀಮತಿ ಶ್ಯಾಮಲಾ ಪುತ್ರಿಯರಾದ ಶ್ರೀಮತಿ ಶಿಲ್ಪಾ ಮತ್ತು ಶ್ರೀಮತಿ ಸ್ಪೂರ್ತಿ, ಸಹೋದರ ಎಸ್.ಎನ್.ಜಯರಾಮಪಿಂಡಿಬನ, ಸಹೋದರಿಯರಾದ ಶ್ರೀಮತಿ ಸಾವಿತ್ರಿ, ಶ್ರೀಮತಿ ಮೀನಾಕ್ಷಿ, ಶ್ರೀಮತಿ ಸುಶೀಲ, ಶ್ರೀಮತಿ ಲಲಿತಾ, ಶ್ರೀಮತಿ ತಿಲಕ ಮತ್ತು ಅಳಿಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.