ಜ.24ರಿಂದ 31ರ ವರೆಗೆ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಜಾತ್ರೋತ್ಸವ

 

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮದ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಜಾತ್ರೋತ್ಸವ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜ.24ರಿಂದ ಜ.31ರವರೆಗೆ ನಡೆಯಲಿದೆ.
ಜ.24ರಂದು ಜಾತ್ರೋತ್ಸವದ ಮುಹೂರ್ತದ ಗೊನೆ ಕಡಿಯುವುದು. ನಂತರ 12ತೆಂಗಿನಕಾಯಿ ಗಣಪತಿ ಹೋಮ, ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಪ್ರತಿ ದಿನ ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಹಾಗೂ ಶ್ರೀ ದೇವರಿಗೆ ರಂಗಪೂಜೆ ನಡೆಯಲಿದೆ.
ಜ.30 ರಂದು ಬೆಳಿಗ್ಗೆ ಅಶ್ವತ್ಥ ವೃಕ್ಷಕ್ಕೆ ಉಪ ನಯನ ಮತ್ತು ವಿವಾಹ ಸಂಸ್ಕಾರ ವಿಧಿ ನಡೆಯಲಿದೆ. ರಾತ್ರಿ ಪ್ರಾರ್ಥನೆ, ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ರಕ್ಷೋಘ್ನ ಹೋಮ, ವಾಸ್ತುಬಲಿ ನಡೆಯಲಿದೆ.
ಜ.31ರಂದು ಬೆಳಿಗ್ಗೆ ಗಣಪತಿ ಹೋಮ, ಬಿಂಬಶುದ್ಧಿ, ಕಲಶಪೂಜೆ, ಬಿಂಬ ಶುದ್ಧಿ ಕಲಶಾಭಿಷೇಕ, ಸಾನ್ನಿಧ್ಯ ಕಲಶ ಪೂಜೆ, ಸಾನ್ನಿಧ್ಯ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಭೂತಬಲಿ,ಸೇವಾಬಲಿಗಳು, ನೃತ್ಯಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಲಿದೆ.
ಜ.31ರಂದು ಸಂಜೆ 5ರಿಂದ ಅಂಗನವಾಡಿ ಕೇಂದ್ರ ರೆಂಜಾಳ, ದಾಸರಬೈಲು, ಮಿತ್ತಡ್ಕ, ಬೊಳ್ಳಾಜೆ ಇವರಿಂದ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ. ರಾತ್ರಿ ಗಂಟೆ 12-00ರಿಂದ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಅಭಿನಯಿಸುವ ಗಡಿನಾಡ ಕಲಾನಿಧಿ ಕೃಷ್ಣ ಜಿ.ಮಂಜೇಶ್ವರ ಸಾರಥ್ಯದಲ್ಲಿ ಚಲನಚಿತ್ರ ನಟ ಕುಸಲ್ದರಸೆ ನವೀನ್ ಡಿ.ಪಡೀಲ್ ನಿರ್ದೇಶಿಸಿ, ಚಲನಚಿತ್ರ ನಟ ಸುಂದರ ರೈ ಮಂದಾರ ಅಭಿನಯದ ಬಂಜಿಗ್ ಹಾಕೊಡ್ಚಿ ತುಳು ಹಾಸ್ಯಮಯ ನಾಟಕ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.