ಶೇಣಿ ಕೋಟಿ ಚೆನ್ನಯ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನೇಮೋತ್ಸವ


ಅಮರಪಡ್ನೂರು ಗ್ರಾಮದ ಶೇಣಿ ಕೋಟಿ ಚೆನ್ನಯ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಜ.2೦ ರಂದು ವರ್ಷಂಪ್ರತಿ ನಡೆಯುವ ಶ್ರೀ ಬ್ರಹ್ಮ ಬೈದೇರುಗಳ ನೇಮೋತ್ಸವ ವು ನಡೆಯಿತು.

ಬೆಳಗ್ಗೆ ಗಣಪತಿ ಹವನ, ಬೈದೇರುಗಳಿಗೆ ಕಲಶಾಭಿಷೇಕ ತಂಬಿಲ ಪ್ರಸನ್ನ ಪೂಜೆಯಾಗಿ ಸಂಜೆ ಭಂಡಾರ ತೆಗೆದು ರಾತ್ರಿ ಬೈದೇರುಗಳು ಗರಡಿ ಇಳಿದು, ಬಳಿಕ ಚೊಕ್ಕಾಡಿ ಉಳ್ಳಾಕುಲು ಪಾದಕ್ಕೆ ಕಾಣಿಕೆ ಅರ್ಪಿಸುವುದು, 11ಗಂಟೆಗೆ ಮಾನಿಬಾಲೆ ಗರಡಿ ಇಳಿದು, ಧರ್ಮ ಚಾವಡಿಗೆ ಬಂದು ಹಿಂತಿರುಗಿ ಪ್ರಾತ:ಕಾಲ ಕೋಟಿ ಚೆನ್ನಯ ರ ದರ್ಶನವಾಗಿ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು. ವಿಶೇಷ ಆಕರ್ಷಣೆಯಾಗಿ ಸಂಜೆ  ಬಾಳಿಲ ಶ್ರೀ ಮಹಾವಿಷ್ಣು ಸಿಂಗಾರಿ ಮೇಳದ ಚೆಂಡೆ ವಾದನ. ರಾತ್ರಿ ಯಕ್ಷಗಾನ ನಾಟ್ಯ ವೈಭವ ಪ್ರದರ್ಶನ, ರಾತ್ರಿ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.