ಕೊಲ್ಲಮೊಗ್ರದಲ್ಲಿ ಅರೆಬಾಸೆ ಗೌಜಿ ಮತ್ತು ಸಾಂಸ್ಕೃತಿಕ ವೈಭವದ ಸಮಾರೋಪ ಸಮಾರಂಭ

ಕೊಲ್ಲಮೊಗ್ರದಲ್ಲಿ ಅರೆಬಾಸೆ ಗೌಜಿ ಮತ್ತು ಸಾಂಸ್ಕೃತಿಕ ವೈಭವದ ಸಮಾರೋಪ ಸಮಾರಂಭವು ಜ. ೨೦ರಂದು ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ್ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ್ ಸಮಾರೋಪ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಅಕಾಡೆಮಿ ಮಾಜಿ ಸದಸ್ಯ ಬಿ.ಸಿ.ವಸಂತ, ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ, ಧರ್ಮಸ್ಥಳ ಯೋಜನೆಯ ವಲಯ ಮೇಲುಸ್ತುವಾರಿ ಶ್ರೀನಿವಾಸ ಗೌಡ, ಹರಿಹರ ಪಲ್ಲತಡ್ಕ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ಕೂಜುಗೋಡು, ಕೊಲ್ಲಮೊಗ್ರ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಪಿ.ಗಿರಿಧರ ಉಪಸ್ಥಿತರಿದ್ದರು.
ಸನ್ಮಾನ: ಸಮಾರೋಪ ಸಮಾರಂಭದಲ್ಲಿ ನಿವೃತ್ತ ಹಿರಿಯ ಯೋಧ ಪಟೇಲ್ ನಾಗಪ್ಪ ಗೌಡ, ಆರೋಗ್ಯ ಸೇವೆಗಾಗಿ ಡಾ. ಚಂದ್ರಶೇಖರ ಕಿರಿಭಾಗ, ಸಮಾಜ ಸೇವೆಗಾಗಿ ಶಿವರಾಜ್ ಕಟ್ಟ ಹಾಗೂ ಹಮೀದ್ ಇಡ್ನೂರು, ಊರುಕಟ್ಟ್‌ನ ಸೇವೆಗಾಗಿ ಉಮೇಶ್ ಆಚಾರ್ಯ, ಸುರೇಶ್ ಚಾಳೆಪ್ಪಾಡಿ, ಸಂಸ್ಕೃತಿ ಸೇವೆಯಲ್ಲಿ ಕೃಷ್ಣ ಬೆಳ್ಚಪ್ಪಾಡ ಹಾಗೂ ಬೊಳಿಯ ಅಜಲ, ಪೆದ್ದೊಳ್ತಿ ಕೂಸುನ ಆರೈಕೆಗಾಗಿ ಮುತ್ತಮ್ಮ ಕಾಚಿಲ, ಶ್ರಮಜೀವಿ ಸೇವೆಗಾಗಿ ಹರ್ಷಕೋನಡ್ಕ, ಸಂಸ್ಕೃತಿ ಸೇವೆಗಾಗಿ ಕಾತ್ಯಾಯಿನಿ ಇವರನ್ನು ಸನ್ಮಾನಿಸಲಾಯಿತು. ಅಕಾಡೆಮಿಯ ಅಧ್ಯಕ್ಷ ಪಿ.ಸಿ.ಜಯರಾಮ, ಸದಸ್ಯ ದಿನೇಶ್ ಹಾಲೆಮಜಲುರವರನ್ನು ಕೆ.ಆರ್.ಗಂಗಾಧರರವರು ಸನ್ಮಾನಿಸಿದರು. ಲೋಕೇಶ್ ಊರುಬೈಲುರವರನ್ನು ಪಿ.ಸಿ.ಜಯರಾಮರು ಸನ್ಮಾನಿಸಿದರು.
ದಿನೇಶ್ ಹಾಲೆಮಜಲು ಸ್ವಾಗತಿಸಿ, ಕಮಲಾಕ್ಷ ಮುಳ್ಳುಬಾಗಿಲು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.