ಗೌಡ ಸೋಶಿಯೋ ಎಜ್ಯುಕೇಶನ್ ಫೌಂಡೇಶನ್ ಸುಳ್ಯ ವತಿಯಿಂದ ನಡೆಸಲ್ಪಡುವ ಮಹಾತ್ಮಾ ಗಾಂಧಿ ವಿದ್ಯಾಸಂಸ್ಥೆಗಳು ಕೊಡಿಯಾಲಬೈಲು ಇದರ ಪ್ರತಿಬಾ ದಿನಾಚರಣೆ ಜ.21 ರಂದು ನಡೆಯಿತು.
ಕಾರ್ಯಕ್ರಮವನ್ನು ಶಾಲಾ ಸಂಚಾಲಕ ಪಿ.ಎಸ್ ಗಂಗಾಧರ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಗೌಡ ಸೋಶಿಯೋ ಎಜ್ಯುಕೇಶನ್ ಫೌಂಡೇಶನ್ ನ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ವಹಿಸಿದ್ದರು. ಅತಿಥಿಗಳಾಗಿ ಉಬರಡ್ಕ ಗ್ರಾ.ಪಂ ಅಧ್ಯಕ್ಷ ಹರಿಪ್ರಸಾದ್ ಪಿ ಉಪಸ್ಥಿತರಿದ್ದರು. ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ನಾರಾಯಣ ಕೆ.ಸಿ , ಗೌಡ ಸೋಶಿಯೋ ಎಜ್ಯುಕೇಶನ್ ಫೌಂಡೇಶನ್ ಖಜಾಂಜಿ ತೇಜಪ್ರಸಾದ್ ಅಮಚೂರು, ಎಂ.ಜಿ.ಎಂ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಚಿದಾನಂದ ಕೆ ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಗೌಡ ಸೋಶಿಯೋ ಎಜ್ಯುಕೇಶನ್ ನ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ, ಉಬರಡ್ಕ ಗ್ರಾ.ಪಂ ಸದಸ್ಯೆ ಮಮತಾ ಕುದ್ಪಾಜೆ ಉಪಸ್ಥಿತರಿದ್ದರು.
ಈ ಸಂದರ್ಭ ದಿ.ರೇಣುಕಾ ಪ್ರಸಾದ್ ಅವರ ಸ್ಮರಣಾರ್ಥ ಅವರ ತಂದೆ ಶಾಂತಪ್ಪ ಗೌಡ ರೂ.10000 ವನ್ನು ಶಾಲಾ ಅಕ್ಷರ ದಾಸೋಹಕ್ಕೆ ನಿಧಿಗೆ ದತ್ತಿನಿಧಿಯಾಗಿ ನೀಡಿದರು. ಮುಖ್ಯೋಪಾಧ್ಯಾಯ ಚಿದಾನಂದ ಕೆ ಸ್ವಾಗತಿಸಿ, ಕಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಶೃತಿ ವಂದಿಸಿದರು. ಶಿಕ್ಷಕಿ ಚಿತ್ರಲೇಖಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಯಶಸ್ವಿಗೆ ಶಾಲಾ ಶಿಕ್ಷಕ ವರ್ಗ ಸಹಕರಿಸಿದರು. ಸಭಾ ಕಾರ್ಯಕ್ರಮ ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.