HomePage_Banner
HomePage_Banner
HomePage_Banner

ಜ.೨೨ಕ್ಕೆ ಕೊಲ್ಲಮೊಗ್ರಕ್ಕೆ ಒಡಿಯೂರು ಸ್ವಾಮೀಜಿ ಆಗಮನ

ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್(ರಿ.)ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಕೊಲ್ಲಮೊಗ್ರ ಘಟಸಮಿತಿಯ ಉದ್ಘಾಟನೆ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜ.೨೨ ರಂದು ಪೂರ್ವಾಹ್ನ ಮಯೂರ ಕಲಾಮಂದಿರ ಕೊಲ್ಲಮೊಗ್ರ ಇಲ್ಲಿ ನಡೆಯಲಿದೆ. ಬೆ.ಗಂ. ೧೧ ಕ್ಕೆ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಲಿದ್ದು ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಉಪಸ್ಥಿತರಿದ್ದು ಆರ್ಶೀವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಅಯ್ಯಪ್ಪ ಸ್ವಾಮಿ ಪೂಜಾ ಮಂದಿರ ಕೊಲ್ಲಮೊಗ್ರು ಡಾ.ಕೆ.ಎಸ್ ಚಂದ್ರಶೇಖರ ಕಿರಿಭಾಗ ವಹಿಸಲಿದ್ದು, ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.