ಉಪ್ಪಿನಂಗಡಿ ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಬೊಲೆರೋ ಎದುರಿನಿಂದ ಬರುತ್ತಿದ್ದ ಲಾರಿಗೆ ಸೈಡ್ ಕೊಡಲು ಹೋಗಿ ಬೊಲೆರೋ ಅರಂತೋಡು ಟಿ.ಎಂ.ಶಹೀದ್ರವರ ಮನೆಯ ಎದುರು ಇರುವ ಪ್ರಪಾತಕ್ಕೆ ಬಿದ್ದ ಘಟನೆ ವರದಿಯಾಗಿದೆ.
ಬೊಲೆರೊದಲ್ಲಿ ೫ ಮಂದಿ ಇದ್ದು ಅಲ್ಪಸ್ವಲ್ಪ ಗಾಯಗಳಾಗಿವೆ. ಬೊಲೆರೋವನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತೆಂದು ತಿಳಿದು ಬಂದಿದೆ.