HomePage_Banner
HomePage_Banner
HomePage_Banner
HomePage_Banner

ಸಂಸ್ಕೃತಿಯ ಮೇಲೆ ಸವಾರಿ ಸಲ್ಲದು : ಬಂದಡ್ಕ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀಗಳು

ಸಮಾಜಕ್ಕೊಂದು ಸಂವಿಧಾನ ಇರುವ ಹಾಗೆ ಬದುಕಿಗಿರುವ ಸಂವಿಧಾನ ಧರ್ಮ. ಈ ಧರ್ಮ ಹಾಗೂ ಸಂಸ್ಕೃತಿಯ ಮೇಲೆ ಸವಾರಿ ಮಾಡುವುದು ಸರಿಯಲ್ಲ ಎಂದು ಒಡಿಯೂರು ದತ್ತಗುರು ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.


ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಾಲಯದ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಬಂದಡ್ಕವೆಂದರೆ ದೇವರು ಬಂದ ಅಡ್ಕವೂ ಹೌದು. ಬಂಧದ ಅಡ್ಕವೂ ಹೌದು ಎಂದು ವ್ಯಾಖ್ಯಾನಿಸಿದ ಶ್ರೀಗಳು, ದೇಗುಲದ ನವೀಕರಣದ ಜೊತೆ ಮನಸ್ಸುಗಳ ನವೀಕರಣವೂ ಆಗಬೇಕು ಎಂದು ಹೇಳಿದರು.


ಉತ್ಸವ ಸಮಿತಿಯ ಉಪಾಧ್ಯಕ್ಷ ಬಿ.ಸದಾಶಿವ ರೈ ಅಧ್ಯಕ್ಷತೆ ವಹಿಸಿದ್ದರು. ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು, ಎಣ್ಮೂರು ಕೋಡಿಚೆನ್ನಯ್ಯ ಗರಡಿಯ ಆಡಳಿತ ಮೊಕ್ತೇಸರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಗೋಪಿನಾಥನ್, ಕರುಣಾಕರ ನಂಬಿಯಾರ್, ಕುಂಬ್ರ ರಘುನಾಥ ರೈ ಮೊದಲಾದವರು ಅತಿಥಿಗಳಾಗಿದ್ದರು. ದೇಗುಲದ ಆಡಳಿತ ಮೊಕ್ತೇಸರ ಬಿ.ಸದಾನಂದ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಧಾಕೃಷ್ಣ ನಂಬಿಯಾರ್ ಸ್ವಾಗತಿಸಿದರು. ಪುರುಷೋತ್ತಮ ಬೊಡ್ಡನಕೊಚ್ಚಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.