ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನ ಕಟ್ಟ, ವಾರ್ಷಿಕ ಮಹೋತ್ಸವ, ನೇಮೋತ್ಸವ

ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನ ಕಟ್ಟ ಇದರ ವಾರ್ಷಿಕ ಮಹೋತ್ಸವವು ಫೆ. ೧೦ ರಿಂದ ಫೆ.೧೨ ರವರೆಗೆ ನಡೆದಿದ್ದು. ವೇದಮೂರ್ತಿ ತಂತ್ರಿ ಕಿಳಿಂಗಾರು ಶ್ರೀ ಶಿವರಾಮ ಭಟ್, ಕೋಡಿಯಡ್ಕ ಇವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಫೆ. ೦೯ ರಂದು ಹಸಿರುವಾಣಿ ಸಮರ್ಪಣೆ ನಡೆಯಿತು. ಫೆ. ೧೦ ರಂದು ಶ್ರೀ ಗಣಪತಿ ಹವನ, ಕಲಶಾಭಿಷೇಕ, ನಾಗತಂಬಿಲ ನಡೆದು ಮಹಾಪೂಜೆ, ಮಂತ್ರಾಕ್ಷತೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನಾ ಕಾರ್ಯಕ್ರಮ ನಡೆದು, ರಾತ್ರಿ ಕಟ್ಟ ಚಾವಡಿಯಿಂದ ದೈವಗಳ ಭಂಡಾರ ದೇವಸ್ಥಾನಕ್ಕೆ ಹೊಗಿ ರಾತ್ರಿ ವಿಶೇಷ ಕಾರ್ತಿಕ ಪೂಜೆ ನಡೆದು ಕಟ್ಟ ಗೋವಿಂದನಗರ ಮತ್ತು ಕೊಲ್ಲಮೊಗ್ರು ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ಸಂಭ್ರಮ ನಡೆಯಿತು. ಕಲಾ ತಪಸ್ವಿ, ನಾಟ್ಯ ಕಲಾಸಿಂಧು, ನಾಟ್ಯ ನಿಲಯಂ, ಶ್ರೀ ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯವೃಂದದವರಿಂದ ಭರತನಾಟ್ಯ ಹಾಗೂ ಜಾನಪದ ನೃತ್ಯ ನೃತ್ಯಾರ್ಪಣಂ ೨೦೧೯ ನಡೆದು, ರಾತ್ರಿ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಫೆ. ೧೧ ರಂದು ದೇವಳದಲ್ಲಿ ದೈವಗಳ ನೇಮ ನಡೆದು ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಮಿತ್ತೋಡಿ ಚಾವಡಿಗೆ ದೇವಳದಿಂದ ದೈವಗಳ ಭಂಡಾರ ಹೋಗಿ, ಸಂಜೆ ಮಿತ್ತೋಡಿ ಚಾವಡಿಯಿಂದ ಶ್ರೀ ಅಗ್ನಿಗುಳಿಗರಾಜ ದೈವಸ್ಥಾನ ಚಾಳೆಪ್ಪಾಡಿ, ಕೊಲ್ಲಮೊಗ್ರಕ್ಕೆ ಇಲ್ಲಿಗೆ ದೀವಟಿಗೆ ಮುಖಾಂತರ ಅಗ್ನಿ ಗುಳಿಗರಾಜ ಭಂಡಾರ ಹೊಗಿ, ರಾತ್ರಿ ಶ್ರೀ ಅಗ್ನಿಗುಳಿಗರಾಜ ದೈವದ ನೇಮೋತ್ಸವ ನಡೆಯಿತು. ಫೆ.೧೨ ರಂದು ಬೆಳಿಗ್ಗೆ ಮಿತ್ತೋಡಿಯಲ್ಲಿ ದೈವಗಳ ನೇಮ ನಡೆದು, ಸಂಜೆ ಕಟ್ಟ ಚಾವಡಿಗೆ ದೈವಗಳ ಭಂಡಾರ ತೆರಳಿತು. ಕಾರ್ಯಕ್ರಮದ ಯಶಸ್ವಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಕಟ್ಟ, ಅರ್ಚಕ ಕೃಷ್ಣಮೂರ್ತಿ ಭಟ್ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಬೊಳಿಯಪ್ಪ ಗೌಡ ಪೈಕ, ಮಣಿಕಂಠಕೊಳಗೆ, ಪುರುಷೋತ್ತಮ ಅಂಬೆಕಲ್ಲು, ಮೋನಪ್ಪ ನಾಯ್ಕ ಕೊಳಗೆ, ಚಂದ್ರಶೇಖರ ಕೊಪ್ಪಡ್ಕ, ಚಿತ್ರಾವತಿ ದಿನೇಶ್ ಕುಮಾರ್ ಮಡ್ತಿಲ, ಸವಿತ ನಾರಾಯಣ ಬಟ್ಟೋಡಿ ಮತ್ತಿತರರು ಹಾಗೂ ಹಲವಾರು ಬೈಲುವಾರು ಸಮಿತಿಗಳು, ಶ್ರೀ ಅಗ್ನಿಗುಳಿಗ ರಾಜ ಸೇವಾ ಸಮಿತಿ ಮತ್ತು ಗ್ರಾಮಸ್ಥರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.