ಯುವಕರು ಸನ್ಮಾರ್ಗದಲ್ಲಿ ನಡೆಯಲು ಉತ್ತಮ ಮಾರ್ಗದರ್ಶನ ನೀಡುವ ಸಮಾಜ ಸೇವಾ ಸಂಸ್ಥೆಗಳಾದ ರೋಒಟರಿ, ರೋಟರ್ಯಾಕ್ಟ್ಗಳ ಕಾರ್ಯವೈಖರಿ ಶ್ಲಾಘನೀಯ ಎಂದು ರೋಟರಿ ಜಿಲ್ಲಾ ಸಹಾಯಕ ಗವರ್ನರ್ ರೊ. ಆಸ್ಕರ್ ಆನಂದ್ ಹೇಳಿದರು.
ಅವರು ಸುಳ್ಯದಲ್ಲಿ ರೋಟರಿ, ರೋಟರ್ಯಾಕ್ಟ್ ಕ್ಲಬ್ ಜಂಟಿಯಾಗಿ ಆಯೋಜಿಸಿದ ಯುವಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.
ರೋಟರಿ ಕ್ಲಬ್ನ ಅಧ್ಯಕ್ಷ ದಯಾನಂದ ಆಳ್ವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರೋಟರಿವಲಯ ಸೇನಾನಿ ರೊ. ಪ್ರಮೋದ್, ರೋಟರ್ಯಾಕ್ಟ್ ಸಭಾಪತಿ ರೊ. ಜೆ.ಕೆ.ರೈ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಪ್ತಾಹದ ಚೆಯರ್ಮೆನ್ ರೊ. ಭವಾನಿಶಂಕರ ವಾರಾಂತ್ಯದ ನಡೆಯುವ ಕಾರ್ಯಕ್ರಮಗಳ ವಿವಿರ ನೀಡಿದರು. ರೊ. ದಯಾನಂದ ಆಳ್ವ ಸ್ವಾಗತಿಸಿ, ರೋಟರ್ಯಾಕ್ಟ್ ಅಧ್ಯಕ್ಷ ಚೇತನ್ ಕಜೆಗದ್ದೆ ವಂದಿಸಿದರು. ರೋಟರಿ ಕಾರ್ಯದರ್ಶಿ ಡಾ. ಗುರುರಾಜ ಕಾರ್ಯಕ್ರಮ ನಿರೂಪಿಸಿದರು.