ನಾಲ್ಕೂರು:ಅರೆಬಾಸೆ ಸಾಹಿತ್ಯ ಸಮ್ಮೇಳನಕ್ಕೆ ಸ್ವಾಗತ ಸಮಿತಿ ರಚನೆ- ಸಂಚಾಲಕರಾಗಿ ದಿನೇಶ್ ಹಾಲೆಮಜಲು,ಅಧ್ಯಕ್ಷರಾಗಿ ತೇಜಕುಮಾರ ಚೆಮ್ನೂರು, ಕಾರ್ಯದರ್ಶಿಯಾಗಿ ಸುಪ್ರಿತ್ ಗುಡ್ಡೆಮನೆ

ಕರ್ನಾಟಕ ಸರಕಾರ ಅರೆಬಾಸೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಇದರ ವತಿಯಿಂದ ಮಾ.೨ರಂದು ಪ್ರಪ್ರಥಮ ಬಾರೀಗೆ ಸುಳ್ಯದಲ್ಲಿ ನಡೆಯುವ ಅರೆಬಾಸೆ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಭಾವಿ ತಯಾರಿಗಾಗಿ ನಾಲ್ಕೂರು ಗ್ರಾಮದ ಹಾಲೆಮಜಲುನಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸಮಿತಿಯ ಅಧ್ಯಕ್ಷರಾಗಿ ತೇಜಕುಮಾರ್ ಚೆಮ್ನೂರು, ಕಾರ್ಯದರ್ಶಿಯಾಗಿ ಆದರ್ಶ ಯೂತ್ ಕ್ಲಬ್‌ನ ಅಧ್ಯಕ್ಷ ಸುಪ್ರೀತ್ ಗುಡ್ಡೆಮನೆ ಹಾಗೂ ಸದಸ್ಯರುಗಳಾಗಿ ದೀಪಕ್ ಕುಂಬಡ್ಕ, ಶಿವಪ್ರಸಾದ್ ಹಾಲೆಮಜಲು, ಕುಸುಮಧರ ಗುಡ್ಡೆಮನೆ, ಸತೀಶ್ ಕಡ್ಲಾರು, ಅರುಣ ಕುಮಾರ ತಿಪ್ಪನೂರು, ವಸಂತ ಹಾಲೆಮಜಲು, ರಾಜೇಶ್ ಕುಕ್ಕುಜೆ, ದುರ್ಗೆಶ್ ಸಾಲ್ತಾಡಿ ಇವರನ್ನು ಆಯ್ಕೆ ಮಾಡಲಾಯಿತು. ಆಯ್ಕೆ ಪ್ರಕ್ರಿಯೆಯನ್ನು ಅಕಾಡೆಮಿ ಸದಸ್ಯ ದಿನೇಶ್ ಹಾಲೇಜು ಮಜಲು ನಡೆಸಿದರು. ಸಭೆಯಲ್ಲಿ ಸಮ್ಮೇಳನಕ್ಕೆ ಅರೆಬಾಸೆ ಕಾಡೆಮಿಯ ಲಾಂಛನದೊಂದಿಗೆ ಬೈಕ್ ರ್‍ಯಾಲಿ ಹಾಗೂ ಹಾಲೆಮಜಲಿನಲ್ಲಿ ಸ್ವಾಗತ ಗೋಪುರ ನಿರ್ಮಿಸುವ ಬಗ್ಗೆ ತೀರ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.