HomePage_Banner
HomePage_Banner

ಬಾವಾಸ್ ಹೋಲ್‌ಸೇಲ್ ಬಜಾರ್ ಶುಭಾರಂಭ

ಪುತ್ತೂರು: ಮಂಗಳೂರಿನ ಬಾವಾ ಗ್ರೂಪ್‌ನವರ ೨ನೇ ಮಳಿಗೆ ಬಾವಾಸ್ ಹೋಲ್‌ಸೇಲ್ ಬಜ್ಝಾರ್ (ಬಾವಾ ಮೈನ್ಸ್ ಮಿನರಲ್ಸ್) ಫೆ.೨೨ರಂದು ದರ್ಬೆ ಬೈಪಾಸ್ ರಸ್ತೆಯ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದ ಹತ್ತಿರ ಆರ್‌ಇಬಿ ಎನ್‌ಕ್ಲೇವ್‌ನಲ್ಲಿ ಶುಭಾರಂಭಗೊಂಡಿತು.
ನೂತನ ಮಳಿಗೆಯನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಮಂಗಳೂರಿನ ಸುರತ್ಕಲ್‌ನಲ್ಲಿ ಪ್ರಾರಂಭಗೊಂಡಿರುವ ಸಂಸ್ಥೆಯ ಎರಡನೇ ಮಳಿಗೆ ಪುತ್ತೂರಿಗೂ ಕಾಲಿಟ್ಟಿದ್ದು ಉತ್ತಮ ಸೇವೆಯ ಮೂಲಕ ಜನ ಮನ್ನಣೆಗಳಿಸಲಿ ಎಂದು ಶುಭಹಾರೈಸಿದರು. ಜುಮಾ ಮಸ್ಜಿದ್‌ನ ಖತೀಬ್ ಸಯ್ಯದ್ ಅಹಮ್ಮದ್ ಪೂಕೋಯ ತಂಙಳ್‌ರವರು ದುವಾಃ ನೆರವೇರಿಸಿದರು.
ಸಂತ ಫಿಲೋಮಿನಾ ಸ್ನಾತಕೋತ್ತರ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಫಾ| ರಿತೇಶ್ ರೋಡ್ರಿಗಸ್, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಪುತ್ತೂರು ತಾಲೂಕು ಜೆಡಿಎಸ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ನ್ಯಾಯವಾದಿ ಫಝಲುಲ್ ರೆಹಮಾನ್, ಉಪ್ಪಿನಂಗಡಿ ಮಸ್ಜಿದ್ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.
ಸ್ಥಳೀಯವಾಗಿ ಉದ್ಯೋಗ ನೀಡುವುದು, ಗುಣಮಟ್ಟದ ಆಹಾರ ಪದಾರ್ಥಗಳನ್ನು ಜನರಿಗೆ ನೀಡುವ ಮೂಲ ಧ್ಯೇಯದೊಂದಿಗೆ ಮಂಗಳೂರಿನ ಬಾವಾ ಗ್ರೂಪ್‌ನವರಿಂದ ಸುರತ್ಕಲ್‌ನಲ್ಲಿ ಪ್ರಾರಂಭಿಸಲಾಗಿದೆ. ಕಡಿಮೆ ದರದಲ್ಲಿ ಆಹಾರ ಸಾಮಾಗ್ರಿಗಳನ್ನು ಜನರಿಗೆ ನೀಡುವ ಉzಶದಿಂದ ನೀರುಳ್ಳಿ, ಆಲೂಗಡ್ಡೆ ಮೊದಲಾದ ಆಹಾರ ಪದಾರ್ಥಗಳನ್ನು ರೈತರಿಂದಲೇ ಖರೀದಿಸಿ ನೇರವಾಗಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಅಲ್ಲದೆ ಅಕ್ಕಿ, ಸಕ್ಕರೆ ಮೊದಲಾದ ಜಿನಸು ಸಾಮಾಗ್ರಿಗಳನ್ನು ಫ್ಯಾಕ್ಟರಿಯಿಂದಲೇ ಖರೀದಿಸಿ ಗ್ರಾಹಕರಿಗೆ ನೀಡಲಾಗುವುದು. ಹಾಗಾಗಿ ನಮ್ಮಲ್ಲಿ ಆಹಾರ ಸಾಮಾಗ್ರಿಗಳು ಕಡಿಮೆ ದರದಲ್ಲಿ ಗ್ರಾಹಕರ ಕೈಸೇರಲಿದೆ ಎಂದು ಮ್ಹಾಲಕ ಮೊಹಿಯಿದ್ದೀನ್ ಬಾವಾ ತಿಳಿಸಿದ್ದಾರೆ.
ಡೋರ್ ಡೆಲಿವರಿ: ಸಂಸ್ಥೆಯ ವತಿಯಿಂದ ಮೂರು ವಾಹನಗಳಲ್ಲಿ ಲೈನ್‌ಸೇಲ್ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿರುವ ಅಂಗಡಿಗಳಿಗೆ ಡೆಲಿವರಿ ನೀಡಲಾಗುವುದು. ಅಲ್ಲದೆ ಅಧಿಕ ಪ್ರಮಾಣದಲ್ಲಿ ಬೇಡಿಕೆಯಿದ್ದಾಗ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೂ ಸಾಮಾಗ್ರಿಗಳನ್ನು ತಲುಪಿಸುವ ವ್ಯವಸ್ಥೆಯಿದೆ ಎಂದು ಬಾವಾ ತಿಳಿಸಿದರು.

ಉದ್ಯೋಗ ಸೃಷ್ಠಿ, ಗುಣಮಟ್ಟದ ಸಾಮಾಗ್ರಿ
ಮಳಿಗೆ ಪ್ರಾರಂಭಿಸುವ ಮುಖಾಂತರ ಸ್ಥಳೀಯವಾಗಿ ಯುವಕರಿಗೆ ಉದ್ಯೋಗ ಒದಗಿಸುವುದು ಹಾಗೂ ಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಸಾಮಾಗ್ರಿಗಳನ್ನು ಒದಗಿಸುವುದೇ ಸಂಸ್ಥೆಯ ಧ್ಯೇಯ. ಒಂದೊಂದು ಮಳಿಗೆಗಳಲ್ಲಿ ಕನಿಷ್ಠ ೨೦ ಮಂದಿಗೆ ಉದ್ಯೋಗ ಒದಗಿಸಲಾಗುವುದು. ಸಂಸ್ಥೆಯ ಎರಡನೇ ಮಳಿಗೆ ಪುತ್ತೂರಿನಲ್ಲಿ ಪ್ರಾರಂಭಗೊಂಡಿದ್ದು ಮುಂದಿನ ದಿನಗಳಲ್ಲಿ ಚಿಲ್ಲರೆ ಹಾಗೂ ರಖಂ ದರದಲ್ಲಿ ವ್ಯಾಪಾರ ನಡೆಸಲಾಗುವುದು. ಅಲ್ಲದೆ ಸಿಮೆಂಟ್ ಹಾಗೂ ಸ್ಟೀಲ್ ವ್ಯಾಪಾರವು ಪುತ್ತೂರಿನಲ್ಲಿ ಪ್ರಾರಂಭಿಸಲಾಗುವುದು. ಸಂಸ್ಥೆಯ ಮೂರನೇ ಮಳಿಗೆ ಕೇರಳ ರಾಜ್ಯದ ಉಪ್ಪಳದಲ್ಲಿ ಪ್ರಾರಂಭಗೊಳ್ಳಲಿದೆ.
-ಮೊಹಿಯಿದ್ದೀನ್ ಬಾವಾ, ಮ್ಹಾಲಕರು ಬಾವಾ ಗ್ರೂಪ್

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.