ಪರಿವರ್ತನೆ ಕಿರುಚಿತ್ರ ಬಿಜಾಪುರ ಪಂಡರಾಪುರದಲ್ಲಿಭರ್ಜರಿ ಚಿತ್ರೀಕರಣ

Advt_Headding_Middle
Advt_Headding_Middle

 

ಸುಳ್ಯ ಭಾವನಾ ಮೀಡಿಯಾರವರ 6 ನೇ ಕಲಾ ಕಾಣಿಕೆ ಪರಿವರ್ತನೆ ಚಿತ್ರದ ಎರಡನೆಯ ಹಂತದ ಚಿತ್ರೀಕರಣ ಜಗದ ಹೆಸರುವಾಸಿ ವಿಜಯಪುರ ಗೋಲಗುಮ್ಮಟ, ಮಹಾರಾಷ್ಟ್ರ ರಾಜ್ಯದ ಪಂಢರಪುರ ಸುಕ್ಷೇತ್ರ ಪಾಂಡುರಂಗ ದೇವಾಲಯದಲ್ಲಿ, ಕುಷ್ಟಗಿ ಮತ್ತು ಶಾಖಾಪುರದಲ್ಲಿ ಬಿರುಸಿನಿಂದ ಚಿತ್ರೀಕರಣ ನಡೆಯಿತು.

ಸಾಹಿತಿ ಚಿತ್ರ ನಿರ್ದೇಶಕರಾದ ಹೆಚ್ ಭೀಮರಾವ್ ವಾಸ್ಟರ್ ರವರು ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದಲ್ಲಿ ಜೂನಿಯರ್ ಪ್ರಭಾಕರ್, ಜೂನಿಯರ್ ಅಂಬರೀಶ್ , ದೀಪಕ್ ರೈ ಪಾಣಾಜೆ , ನಮಿತಾ ಮಂಗಳೂರು , ಗುರುಸ್ವಾಮಿ ಬೀರಮಂಗಲ, ನಟರಾಜ್ ಮಾಸ್ಟರ್, ಜಯಂತಿ ಸುವರ್ಣ , ಭೀಮರಾವ್ ವಾಸ್ಟರ್, ಮಾ| ಉಜ್ವಲ್ ವಾಸ್ಟರ್, ಸುಜಯ ಕೃಷ್ಣಪ್ಪ , ಕೆ ಟಿ ವಿಶ್ವನಾಥ್ , ಗೋಪಾಲ್ ನಡುಬೈಲು , ತಿರುಮಲೇಶ್ವರಿ, ತುಳಸಿ , ತುಕಾರಾಮ ಸುರ್ವೇ , ವಿಜೇತ್ ಅಡ್ಡಡ ನಟಿಸಿರುವರು. ಎಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿರುವ ಈ ಪರಿವರ್ತನೆ ಚಿತ್ರದಲ್ಲಿ ಎರಡು ಗೀತೆಗಳು ಇವೆ . ಛಾಯಾಗ್ರಹಣ ಶಕ್ತಪ್ರಸಾದ್ ಬಿ ಸಿ ರೋಡ್ , ಸಹನಿರ್ದೇಶನ ವಿಜಯ್ ದಾಸ್ ನವಲಿ ಅವರದು. ಈಗ ದ್ವಿತೀಯ ಹಂತದ ಚಿತ್ರೀಕರಣ ಮುಗಿದಿದೆ ಎಂದು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.