ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿರುವ ಬಟ್ರುಪ್ಪಾಡಿ ಶ್ರೀ ಮಹಾವಿಷ್ಣು ದೇವಸ್ಥಾನದ ದೈವಸ್ಥಾನಗಳು

Advt_Headding_Middle
Advt_Headding_Middle

ಬಳ್ಪ ಗ್ರಾ.ಪಂ. ವ್ಯಾಪ್ತಿಯ ಕೇನ್ಯ ಗ್ರಾಮದ ಶ್ರೀ ಮಹಾವಿಷ್ಣು ದೇವಸ್ಥಾನ ಬಟ್ರುಪ್ಪಾಡಿ, ಕಣ್ಕಲ್‌ನಲ್ಲಿ ಕ್ಷೇತ್ರದ ದೈವಗಳಾದ ಗ್ರಾಮ ದೈವ ಶ್ರೀ ಉಳ್ಳಾಕುಲು ಹಾಗೂ ಪರಿವಾರ ದೈವಗಳ ದೈವಸ್ಥಾನವು ಜೀರ್ಣೋದ್ಧಾರಗೊಂಡು ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಂಡಿದೆ. ಕೇನ್ಯ ಗ್ರಾಮದ ಕಣ್ಕಲ್ ಬಟ್ರುಪ್ಪಾಡಿ ಎಂಬಲ್ಲಿ ಕುಮಾರಧಾರಾ ನದಿಯ ತಟದಲ್ಲಿ ಸುಮಾರು ೬೦೦ ವರ್ಷಗಳ ಹಿಂದೆ ಬಳ್ಳಾಲರ ಕಾಲದಲ್ಲಿ ಸ್ಥಾಪಿತವಾದದ್ದು ಎಂಬ ಐತಿಹ್ಯವಿರುವ ರಾಜ್ಯ ಮುಜರಾಯಿ ಇಲಾಖೆಯ ಆಧೀನದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನವು ೨೦೧೫-೧೬ರಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶವವು ವಿಜೃಂಭಣೆಯಿಂದ ಜರಗಿತ್ತು. ದೇವಾಲಯದ ಪೂರ್ವ ಆಗ್ನೇಯ ದಿಕ್ಕಿನಲ್ಲಿ ಈ ದೇವಸ್ಥಾನಕ್ಕೆ ಸಂಬಂಧಿಸಿದ ಉಳ್ಳಾಕುಲು (ಪೂಮಾಣಿ, ಕಿನ್ನಿಮಾಣಿ) ಸಾನಿಧ್ಯ, ಭುಮಿ ಪಂಜುರ್ಲಿ, ರಕ್ತ ಚಾಮುಂಡಿ ಸಾನಿಧ್ಯ, ಮತ್ತು ಗುಳಿಗ ಸಾನಿದ್ಯಗಳಿದ್ದು, ಇದೀಗ ಜೀರ್ಣೋದ್ಧಾರಗೊಂಡಿದೆ, ಮಾ. ೩೧ ರಿಂದ ಎ. ೧ರ ತನಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಸಾನಿಧ್ಯದ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ ಸೇರಿದಂತೆ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಲಿದೆ. ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ನಾರ್ಣಪ್ಪ ಗೌಡ, ಜೀರ್ಣೋದ್ಧಾರ ಸಮಿತಿ ಅದ್ಯಕ್ಷರಾಗಿರುವ ಕ್ಷೇತ್ರದ ಪವಿತ್ರಪಾಣಿ ಕೆ. ರವಿ ಅಮ್ಮಣ್ಣಾಯ, ಪ್ರಧಾನ ಕಾರ್ಯದರ್ಶಿ ರಾಜೀವ ಗೌಡ ಕಣ್ಕಲ್ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾಗಿರುವ ಕೆ. ಭರತ್, ಕೆ. ಸಾಂತಪ್ಪ ಗೌಡ, ಕೆ. ಭಾಸ್ಕರ ರೈ, ಯಶೋಧರ ಜಿ, ಶ್ರೀಮತಿ ಜಾನಕಿ, ಮತ್ತು ಶ್ರೀಮತಿ ಸುಲೋಚನಾ ಸೇರಿದಂತೆ ಊರವರು ಈ ದೈವಸ್ಥಾನದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.