ಬಳ್ಪದ ಕೊನ್ನಡ್ಕದಲ್ಲಿ 4 ನೇ ವರ್ಷದ ನೇಮೋತ್ಸವ

Advt_Headding_Middle
Advt_Headding_Middle


ಬಳ್ಪದ ಕೊನ್ನಡ್ಕ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ದ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ, ಗುಳಿಗ, ತನ್ನಿಮಾಣಿಗ ಹಾಗೂ ಸ್ವಾಮಿ ಕೊರಗಜ್ಜ ದೈವಗಳ 4 ನೇ ವರ್ಷದ ನೇಮೋತ್ಸವ ಫೆ.28 ಮತ್ತು ಮಾ.1 ರಂದು ನಡೆಯಿತು.

ಫೆ.28 ರಾತ್ರಿ ಗುಳಿಗ ದೈವದ ಭಂಡಾರ ತೆಗೆದು. ಗುಳಿಗ ದೈವದ ನೇಮ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮೊಗೇರ್ಕಳ ದೈವಗಳು ಗರಡಿ ಇಳಿಯುವ, ತನ್ನಿ ಮಾಣಿಗ ಗರಡಿ ಇಳಿಯುವ ಕಾರ್ಯಕ್ರಮ ನಡೆಯಿತು. ಮಾ.1 ರ ಬೆಳಗ್ಗೆ ಮೊಗೇರ್ಕಳ ದೈವದ ಹರಕೆ ಸೇವೆ ನಡೆದು, ದೈವಗಳು ಹಾಲು ಕುಡಿಯುವ ಕಾರ್ಯಕ್ರಮ ನಡೆಯಿತು. ಆ ಬಳಿಕ ಕೊರಗಜ್ಜ ದೈವದ ನೇಮ ನಡೆಯಿತು.

ಕಾರ್ಯಕ್ರಮ ಯಶಸ್ವಿ ಗೆ ಆಡಳಿತ ಮಂಡಳಿ ಅಧ್ಯಕ್ಷ ಮೋನಪ್ಪ ಕೊನ್ನಡ್ಕ, ಕಾರ್ಯದರ್ಶಿ ಕಿರಣ್ ಪಟೋಳಿ, ನೇಮೋತ್ಸವ ಸಮಿತಿ ಚಂದ್ರಶೇಖರ ಗೌಡ ಪಂಡಿ, ಕಾರ್ಯದರ್ಶಿ ಶೂರಪ್ಪ ಗೌಡ ಪಂಡಿ, ಕೋಶಾಧಿಕಾರಿ ಚೇತನ್ ಕೊನ್ನಡ್ಕ ಹಾಗೂ ಆಡಳಿತ ಮಂಡಳಿಯ ಸದಸ್ಯರು, ನೇಮೋತ್ಸವ ಸಮಿತಿ ಸದಸ್ಯರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.