Breaking News

ಅಯ್ಯನಕಟ್ಟೆಯಲ್ಲಿ ಬಾಲಕನಿಗೆ ಪಿಕಪ್ ಗುದ್ದಿ ಪರಾರಿ

Advt_Headding_Middle
Advt_Headding_Middle

ಅಯ್ಯನಕಟ್ಟೆಯಲ್ಲಿ ಅಂಗವಾಡಿಗೆ ಹೋಗುವ ಬಾಲಕನಿಗೆ ಪಿಕಪ್ ಗುದ್ದಿ ಪಿಕಪ್ ಪರಾರಿಯಾದ ಘಟನೆ ಮಾ.2 ರಂದು ನಡೆದಿದೆ.

ಅಯ್ಯನಕಟ್ಟೆ ಅಂಗನವಾಡಿಗೆ ಹೋಗುವ ಮಹಮ್ಮದ್ ಮಹರೂಫ್ ಎಂಬ ಬಾಲಕ ಅಂಗನವಾಡಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬಾಳಿಲ ಕಡೆಯಿಂದ ಬೆಳ್ಳಾರೆ ಕಡೆಗೆ ಬರುತ್ತಿರುವ ಪಿಕಪ್ ಡಿಕ್ಕಿ ಹೊಡೆಯಿತು.

ಡಿಕ್ಕಿ ಹೊಡೆದ ಪರಿಣಾಮ ಬಾಲಕನ ತಲೆಗೆ ಮತ್ತು ಕಾಲಿಗೆ ಗಾಯವಾಗಿದ್ದು ಕೂಡಲೇ ಅವನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಬಾಲಕನಿಗೆ ಗುದ್ದಿದ ಪಿಕಪ್ ಪರಾರಿಯಾಗಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಬಾಲಕನ ತಂದೆ ಮೊಯಿದ್ದೀನ್ ಕುಂಞಿಯವರು ದೂರು ನೀಡಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.