Breaking News

ಮಾ.೭: ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖಾ ವತಿಯಿಂದ ಮಜ್ಲಿಸ್ನೂರು ಕಾರ್ಯಕ್ರಮ

Advt_Headding_Middle
Advt_Headding_Middle

ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆಯ ಅಶ್ರಯದಲ್ಲಿ ಮಜ್ಲಿಸ್ನೂರು ಉದ್ಘಾಟನಾ ಸಮಾರಂಭ ಮಾರ್ಚ್ ೭ ರಂದು ಮಗ್ರಿಬ್ ನಮಾಜ್ ಬಳಿಕ ಅರಂತೋಡು ಮಸೀದಿ ವಠಾರದಲ್ಲಿ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ಪಠೇಲ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಬಹು ಇಸಾಖ್ ಬಾಖವಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಎಸ್‌ಕೆ ಎಸ್‌ಎಸ್ ಎಫ್ ಅಧ್ಯಕ್ಷ ಬಹು ಅನೀಸ್ ಕೌಸರಿ ಪ್ರಸ್ತಾವಿಕ ಭಾಷಣವನ್ನು ಮಾಡಲಿದ್ದಾರೆ. ಬಹು ಅಸ್ಸಯ್ಯದ್ ಅಲಿ ತಂಙಳ್ ಕುಂಬೋಲ್ ಮಜ್ಲಿಸ್ನೂರ್ ನೇತೃತ್ವವನ್ನು ವಹಿಸಲಿದ್ದಾರೆ. ಸದರ್ ಮುಅಲ್ಲಿಂ ನವಾಝ್ ದಾರಿಮಿ ಸ್ವಾಗತ ಭಾಷಣವನ್ನು ಮಾಡಲಿದ್ದಾರೆ. ಮುಖ್ಯ ಆತಿಥಿಯಾಗಿ ಕೆ.ಪಿ.ಸಿ.ಸಿ.ಕಾರ್ಯದರ್ಶಿ ಟಿ.ಎಮ್ ಶಹೀದ್ ತೆಕ್ಕಿಲ್,ಸುಳ್ಯ ತಾಲ್ಲೂಕು ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಸಂಪಾಜೆ, ಹಮೀದ್ ಹಾಜಿ ಸುಳ್ಯ , ಮುಅಲ್ಲಿಂ ಸಂಶುದ್ದೀನ್ ಮುಸ್ಲಿಯಾರ್,ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷ ಅಬ್ದುಲ್ ಮಜೀದ್,ಇಬ್ರಾಹಿಂ ಹಾಜಿ ಕತ್ತಾರ್,ಗೂನಡ್ಕ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಮನೀರ್ ದಾರಿಮಿ,ಅರಂತೋಡು ಶಾಖೆಯ ಅಧ್ಯಕ್ಷ ಅಶೀಕ್ ಕುಕ್ಕುಂಬಳ ಮುಂತಾದವರು ಭಾಗವಹಿಸಲಿದ್ದಾರೆ.ಸ್ತ್ರೀಯರಿಗೆ ಪ್ರತೇಕ ಸ್ಥಳವಕಾಶವಿದೆ.ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ವಿತರಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.