Breaking News

ನನಗೆ ನೀಡಿದ ಸನ್ಮಾನವನ್ನು ದೇಶಕ್ಕಾಗಿ ಪ್ರಾಣತೆತ್ತ ಸೈನಿಕರಿಗೆ ಅರ್ಪಿಸುತ್ತೇನೆ : ಸುಧಾಕರ್ ರೈ

Advt_Headding_Middle
Advt_Headding_Middle

ರಕ್ತದಾನದಲ್ಲಿ ಇತಿಹಾಸ ನಿರ್ಮಿಸಿದ ಸುಮಾರು 104 ಬಾರಿ ರಕ್ತದಾನ ಮಾಡಿ ಜಿಲ್ಲೆಯಲ್ಲಿಯೇ ಪ್ರಥಮ ಎನಿಸಿದ ಸುಳ್ಯದ ಸುಧಾಕರ್ ರೈ ಯವರ ಸಾಹಸಮಯ ಸಾಧನೆಯನ್ನು ಗುರುತಿಸಿಪೇರಡ್ಕ ಉರೂಸ್ ಸಮಾರಂಭದ ಸರ್ವ ಧರ್ಮ ಸಮ್ಮೇಳನದಲ್ಲಿ ಅವರನ್ನು ಸನ್ಮಾನಿಸಲಾಯಿತು.

 


ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಇಂದು ನನಗೆ ನಾಳೆ ನಿಮಗೂ ರಕ್ತದ ಅವಶ್ಯಕತೆ ಬರಬಹುದು ಯುವಕರು ಯಾವುದೇ ಅಂಜಿಕೆಯಿಲ್ಲದೆ ರಕ್ತದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಇಂದು ನನಗೆ ನೀಡಿದ ಸನ್ಮಾನಗಳನ್ನು ನಮ್ಮ ದೇಶಕ್ಕಾಗಿ ಹೋರಾಡಿ ಪ್ರಾಣತೆತ್ತ ವೀರ ಸೈನಿಕರಿಗೆ ಅರ್ಪಿಸುತ್ತಿದ್ದೇನೆ ಎಂದು ಬಾವುಕರಾಗಿ ನುಡಿದರು.
ಕಲ್ಲುಗುಂಡಿ ಚರ್ಚ್ ಧರ್ಮಗುರುಗಳಾದ ನವೀನ್ ಪಿಂಟೋ, ಪೇರಡ್ಕ ಖತೀಬ್ ಅಶ್ರಫ್ ಫೈಝಿ ಸುಂಕದಕಟ್ಟೆ, ಶಾಲುಹೊದೆಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ SಏSSಈ ರಾಜ್ಯ ಅಧ್ಯಕ್ಷರಾದ ಅನೀಸ್ ಕೌಸರಿ ಕೆ ಪಿ ಜೋನಿ, ತೀರ್ಥರಾಮ ಪರ್ನೋಜಿ, ಜಮಾಲ್ ಬೆಳ್ಳಾರೆ ಜಿ ಕೆ ಹಮೀದ್, ತಾಜುದ್ದೀನ್ ಟರ್ಲಿ, ಡಾ ಲೀಲಾದರ್, ಚಕ್ರಪಾಣಿ ಪೇರಡ್ಕ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.