Breaking News

ಜನರ ಸಹಕಾರವಿದ್ದರೆ ಅಭಿವೃದ್ಧಿ ವೇಗ ಪಡೆಯುತ್ತದೆ- ಶಾಸಕ ಎಸ್ ಅಂಗಾರ

Advt_Headding_Middle
Advt_Headding_Middle

ನೇರಳ-ಅಡ್ಕ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ- ಶಾಸಕರಿಂದ ಗುದ್ದಲಿ ಪೂಜೆ
ಪಂಜದ ನೇರಳ ಅಡ್ಕ ರಸ್ತೆಯು ಶಾಸಕರ ಶಿಪಾರಸ್ಸಿನ ಮೇರೆಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ 1 ಕೋಟಿ 3೦.ಲಕ್ಷ ರೂ.ವಿನ ವೆಚ್ಚದಲ್ಲಿ ಕಾಂಕ್ರಿಟ್‌ಕರಣ ಗೊಂಡು ಅಭಿವೃದ್ಧಿ ಕೆಲಸವು ನಡೆಯಲಿದೆ. ಕಾಮಗಾರಿಗೆ ಮಾ.2ರಂದು ಶಾಸಕ ಎಸ್ ಅಂಗಾರ ರವರು ಅಡ್ಕ ಎಂಬಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು.


‘ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಆರಂಭ ಗೊಂಡಗ ಸ್ವಾರ್ಥ ಚಿಂತನೆಯಿಂದ ಅದಕ್ಕೆ ಅಡೆ ತಡೆಗಳು ಯಾರು ಕೂಡ ಒಡ್ಡ ಬಾರದು. ಯಾವುದೇ ಕಾಮಗಾರಿಗಳು ಸಮಯಕ್ಕೆ ಸರಿಯಾಗಲು ಜನರ ಸಂಪೂರ್ಣ ಸಹಕಾರ ಅಗತ್ಯ’ ಎಂದು ಹೇಳಿದರು.
ಈ ಸಂದರ್ಭ ಜಿ.ಪಂ.ಸದಸ್ಯ ಎಸ್ ಎನ್ ಮನ್ಮಥ, ಗ್ರಾ.ಪಂ.ಅಧ್ಯಕ್ಷ ಕಾರ‍್ಯಪ್ಪ ಗೌಡ ಚಿದ್ಗಲ್ಲು,ಎ.ಪಿ.ಎಂ.ಸಿ ಉಪಾಧ್ಯಕ್ಷ ಸಂತೋಷ್ ಜಾಕೆ, ಗ್ರಾ.ಪಂ. ಸದಸ್ಯರಾದ ಲಿಗೋಧರ ಆಚಾರ್ಯ, ಜಗಧೀಶ ಪುರಿಯ, ಚಂದ್ರಾವತಿ ಸಂಪ, ವಿಮಲ ನಾಗತೀರ್ಥ, ಮಂಜುಳಾ ಅತ್ಯಡ್ಕ, ಮಾಜಿ ಸದಸ್ಯರಾದ ಪ್ರಕಾಶ್ ಜಾಕೆ, ನಿರ್ಮಲ ಪಲ್ಲೋಡಿ, ಪಂಜ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಿ ಚಂದ್ರಶೇಖರ ಶಾಸ್ತ್ರಿ, ಉಪಾಧ್ಯಕ್ಷ ಲೋಕೇಶ್ ಬರೆಮೇಲು, ಶಿವರಾಮಯ್ಯ ಕರ್ಮಾಜೆ,ವೆಂಕಟೇಶ್ವರ ಜೋಯಿಷ, ರಘುರಾಮ ಭಟ್ ಅಡ್ಕ, ಜಯರಾಮ ಭಟ್ ಅಡ್ಕ, ಚಿನ್ನಪ್ಪ ಚೊಟ್ಟೆಮಜಲು, ತಿರುಮಲೇಶ್ವರ ಭಟ್ ಗುಂಡಿಮಜಲು, ಚೆನ್ನಕೇಶವ ಆಚಾರ್ಯ ,ಸುಬ್ರಾಯ ಭಟ್ ಅಲಕಾ, ಪಿ.ಡಬ್ಲ್ಯು ಶ್ರೀನಿವಾಸ ಮೂರ್ತಿ, ಇಂಜಿನಿಯರ್ ಪರಮೇಶ್ವರ ನಾಯಕ್, ಗುತ್ತಿಗೆದಾರ ಸಂಜೀತ್ ,ಫಲಾನುಭಾವಿಗಳು ಉಪಸ್ಥಿತರಿದ್ದರು. ಇಲ್ಲಿನ ಹೊಳೆಗೆ ಕಿಂಡಿ ಅಣೆಕಟ್ಟು ಅವಶ್ಯವಿರುವುದಾಗಿ ಶಾಸಕರಲ್ಲಿ ಬೇಡಿಕೆ ಇಟ್ಟರು. ಮುಂಜಾನೆ ವಿಶೇಷವಾಗಿ ಭೂಮಿ ಪೂಜೆಯು ವಿವಿಧ ವೈಧಿಕ ವಿಧಾsನಗಳೊಂದಿಗೆ ಜರುಗಿತು.ಕಾರ‍್ಯಕ್ರಮದಲ್ಲಿ ಉದಯಶಂಕರ ಅಡ್ಕ ನಿರೂಪಿಸಿದರು.ಲೋಕೇಶ್ ಬರೆಮೇಲು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.