ಮಾ.8-12 : ಅಜ್ಜಾವರ ಮೇನಾಲ ಮಖಾಂ ಉರೂಸ್ 5 ದಿನಗಳ ಧಾರ್ಮಿಕ ಪ್ರಭಾಷಣ

Advt_Headding_Middle
Advt_Headding_Middle

ಅಜ್ಜಾವರ ಮೇನಾಲ ಮಖಾಂ ಉರೂಸ್, 5 ದಿನಗಳ ಧಾರ್ಮಿಕ ಪ್ರಭಾಷಣ ಮಾ.8 ರಿಂದ 12 ವರಗೆ ಮೇನಾಲ ದರ್ಗಾ ಶರೀಫ್ ವಠಾರದಲ್ಲಿ ನಡೆಯಲಿದೆ.
ಉರೂಸ್ ಸಮಾರಂಭದಂದು ಅನೇಕ ಉಲಮ ಉಮಾರಗಳು ಭಾಗವಹಿಸಲಿದ್ದು ಅಲ್ಲದೆ ಸಮಾರೋಪ ಸಮಾರಂಭದಂದು ಸೌಹಾರ್ದ ಕಾರ್ಯಕ್ರಮ ನಡೆಯಲಿದೆ.

ಮಾ.8 ಹಾಗೂ 9 ರಂದು ನಡೆಯುವ ಸಭಾ ಕಾರ್ಯಕ್ರಮವು ಅಜ್ಜಾವರ ಜುಮಾ ವಠಾರದಲ್ಲಿ ನಡೆಯಲಿದೆ. ಮಾ.1೦,11,12ರ ಕಾರ್ಯಕ್ರಮಗಳು ಮೇನಾಲ ದರ್ಗಾ ಶರೀಫ್ ವಠಾರದಲ್ಲಿ ನಡೆಯಲಿದೆ.
ಮಾ.೮ರಂದು ಶುಕ್ರವಾರ ಅಜ್ಜಾವರ ಮುಹಿಯ್ಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶೈಖುನಾ ಅಹ್ಮದ್ ಪೊಕೋಯ ತಂಙಳ್ ದುಆಃ ನೇತೃತ್ವ ವಹಿಸಿ ಕಾಉಕ್ರಮವನ್ನು ಉದ್ಘಾಟಿಸಲಿದ್ದಾರೆ. ನಂತರ ಧಾರ್ಮಿಕ ಸಬಾ ಕಾರ್ಯಕ್ರಮ ನಡೆಯ ಲಿದ್ದು, ಅಜ್ಜಾವರ ಎಂಜೆಎಂ ಇದರ ಖತೀಬರಾದ ಪಿ.ಎ. ಉಮ್ಮರ್ ಫೈಸಿ ನೆಲ್ಯಾಡಿ ಮಹಾತ್ಮರ ಜೀವನ ಮತ್ತು ಸಂದೇಶ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಮಾ.೯ರಂದು ಶನಿವಾರ ಅಜ್ಜಾವರ ಮುಹಿಯ್ಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಯುವಕರ ಪಾತ್ರ ಎಂಬ ವಿಷಯದ ಬಗ್ಗೆ ಬಹು. ಅಬ್ದುಲ್ ಅಝೀರh ಅಶ್ರಫಿ, ಪಾಣತ್ತೂರು ಉಪನ್ಯಾಸ ನೀಡಲಿದ್ದಾರೆ.
ಮಾ.೧೦ರಂದು ಮೇನಾಲ ದರ್ಗಾ ಶರೀಫ್‌ನಲ್ಲಿ ಮಖಾಂ ಆಲಂಕಾರ ಮತ್ತು ದಿಕ್ರ್ ಹಲ್ಕ ನಡೆಯಲಿದೆ. ಕಾರ್ಯಕ್ರಮದ ನೇತೃತ್ವ ವನ್ನು ಶ್ಯೆಕುನಾ ಟಿ.ವಿ.ಉಂಬು ತಂಙಳ್ ಆದೂರು ವಹಿಸಲಿದ್ದಾರೆ.
ಉದ್ಘಾಟನೆ ಹಾಗೂ ದುಆಃವನ್ನು ಸಯ್ಯಿದುಲ್ ಉಲಮ ಮಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ನೆರವೇರಿಸಲಿದ್ದಾರೆ. ನಂತರ ಜೌಲಿಯಾಕ್ಕಳು ಮತ್ತು ಕರಾಮತ್ತು ರಂಬ ವಿಷಯದ ಬಗ್ಗೆ ಉಸ್ತಾದ್ ಉಮ್ಮರ್ ಹುದವಿ ಪೊಳಪ್ಪಾಡಂ ಉಪನ್ಯಾಸ ನೀಡಲಿದ್ದಾರೆ.
ಮಾ.೧೧ರಂದು ಮೇನಾಲ ದರ್ಗಾ ಶರೀಫ್ ವಟಾರದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ “ಕುಟುಂಬ ಜೀವನ ಇಸ್ಲಾಮಿನಲ್ಲಿ ” ಎಂಬ ವಿಷಯದ ಬಗ್ಗೆ ನವಾಸ್ ಮನ್ನಾನಿ ತಿರುವನಂತಪುರ, ಕೇರಳ ಇವರು ಉಪನ್ಯಾಸ ನೀಡಲಿದ್ದಾರೆ.
ಮಾ.೧೨ರಂದು ಉರೂಸ್ ಸಮಾರೋಪ ಸಮಾರಂಭಕ್ಕೆ ಮುನ್ನ ಸೌಹಾರ್ದ ಸಂಗಮ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರದಲ್ಲಿ ಊರಿನ ಸರ್ವಧರ್ಮಿಯರು ಭಾಗವಹಿಸಲಿದ್ದಾರೆ.
ಸೌಹಾರ್ದ ಸಂಗಮ ಕಾರ್ಯಕ್ರಮವು ಸಂಜೆ ೮ರಿಂದ ಪ್ರಾರಂಭಗೊಂಡು ಖತೀಬರಾದ ಉಮ್ಮರ್ ಫೈಝಿ ನೆಲ್ಯಾಡಿ ದುಆಃ ನೇತೃತ್ವ ವಹಿಸಲಿದ್ದಾರೆ. ಕಾರ್ಯಕ್ರಮ ಅಧ್ಯಕ್ಷತೆಯನ್ನು ಮೇನಾಲ ದರ್ಗಾ ಶರೀಫ್ ಮೊಕ್ತೇಸರಾದ ಎಂ. ಗುಡ್ಡಪ್ಪ ರೈ ವಹಿಸಲಿದ್ದಾರೆ. ಕಾರ್ಯಕ್ರಮ ಮುಖ್ಯ ಮುಖ್ಯ ಅತಿಥಿಗಳಾಗಿ ಸೀತರಾಮ ಕೇವಳ ಪ್ರಿನ್ಸಿಪಾಲ್ ವಿದ್ಯಾರಶ್ಮಿ ವಿದ್ಯಾಲಯ ಮತ್ತು ಫಾದರ್ ಅನೀಲ್ ರೋಶನ್ ಲೋಬೋ ಧರ್ಮ ಗುರುಗಳು ಸಾಂತ ರೀತಮ್ಮ ಚರ್ಚ್ ಪಂಜ ಹಾಗೂ ಜನಾಬ್ ಕೆ.ಎಂ. ಇಕ್‌ಬಾಲ್ ಬಾಳಿಲ ಜಿಲ್ಲಾ ಸಂಚಾಲಕರು ಮಂಗಳೂರು ಸಹೋದರರು ಸೌಹಾರ್ದ ವೇದಿಕೆ ದ.ಕ. ಹಾಗೂ ಮಹಮ್ಮದ್ ಹಾಜಿ ಕುಕ್ಕುವಲ್ಲಿ, ಕರ್ನಾಟಕ ರಕ್ಷಣ ವೇದಿಕೆ ಜಿಲ್ಲಾ ಅಧ್ಯಕ್ಷರು ಹಾಗೂ ಅಬ್ದುಲ್ಲ ಕುಂಞಿ ಸಂಕೇಶ್ ಹಾಗೂ ಸರ್ವಧರ್ಮಿಯರು ಭಾಗವಹಿಸಲಿದ್ದಾರೆ.
ನಂತರ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಹು ಶೈಖುನಾ ಸೈಯದ್ ಅಬೂಬಕ್ಕರ್ ಅಸ್ಸಖಾಫ್ ಟಿ.ವಿ. ಅಟ್ಟು ತಂಙಳ್ ಆದೂರ್ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ದುಗಲಡ್ಕ ಜಾಮಿಃ ಅರೆಬಿಕ್ ಕಾಲೇಜು ಇದರ ಪ್ರಧಾನ ವ್ಯವಸ್ಥಾಪಕರಾದ ಬಹು ಶೈಖುನಾ ಅಲ್ಹಾಜ್ ಎನ್.ಪಿ.ಎಮ್ ಝೈನುಲ್ ಆಬಿದೀನ್ ತಂಞಳ್ ಕುನ್ನುಂಗೈ ಕೇರಳ ನೆರವೇರಿಸಲಿದ್ದಾರೆ. ಶೈಖುನಾ ಸೈಂiiದ್ ಆಬ್ದುಲ್ ಖಾದರ್ ಅಸ್ಸಖಾಫ್ ಟಿ.ವಿ. ಉಂಬು ತಂಙಳ್ ಅಧೂರು ಭಾಗವಹಿಸಲಿದ್ದಾರೆ.
ಹಾಫಿಲ್ ಕುಮ್ಮನಂ ನಿಝಾಮುದ್ದೀನ್ ಅಲ್ ಅಸಹರಿ `ಜೀವನ ಪರಲೋಕ ಮೋಕ್ಷಕ್ಕಾಗಿ’ ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ.
ಧಾರ್ಮಿಕ ಉಪನ್ಯಾಸವು ಪ್ರತೀ ದಿನ ಸಂಜೆ ರಾತ್ರಿ ೯.೩೦ಕ್ಕೆ ಆರಂಭಗೊಳ್ಳುವುದು. ಅಲ್ಲದೇ ಸುಳ್ಯದಿಂದ ೪ ಕಿ.ಮೀ. ದೂರದಲ್ಲಿರುವ ದರ್ಗಾ ಶರೀಪ್‌ಗೆ ತೆರಳುವವರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಮಾ.೧೦ರಂದು ಸೀರಣಿ ಹಾಗೂ ಅನ್ನದಾನ ವಿತರಣೆ ನಡೆಯಲಿದೆ. ಉರೂಸ್ ಸಮಾರೋಪ ಸಮಾರಂಭದಂದು ರಾತ್ರಿ ಕೂಟು ಪ್ರಾರ್ಥನೆ, ಮೌಲೀದ್ ಪಾರಶಯಣ ಮತ್ತು ಅನ್ನದಾನವಿರುವುದು. ಹರಕೆ ಮತ್ತು ಇತರ ಸಾಮಾಗ್ರಿಗಳನ್ನು ನೇರವಾಗಿ ದರ್ಗಾಕ್ಕೆ ತಲುಪಿಸಬೇಕಾಗಿ ಪ್ರಕಟಣೆ ತಿಳಿಸಿದೆ.

ಮಾ.5ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಸೀದಿ ಯವರು ಊರುಸ್ ಕಾರ್ಯಕ್ರಮದ ವಿವರ ನೀಡಿದರು. ಪ್ರಮುಖ ರಾದ ಅಬ್ದುಲ್ ಖಾದರ್ ಹಾಜಿ, ಅಬ್ದುಲ್ ರಹಮಾನ್ ಹಾಜಿ, ಅಬೂಬಕ್ಕರ್ ಸಿ.ಎ., ಮಹಮ್ಮದ್ ಹಾಜಿ ಬಯಂಬು, ಅಂದ್ ಹಾಜಿ ಮೊದಲಾದವರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.