HomePage_Banner
HomePage_Banner
HomePage_Banner

ದೇವರನ್ನು ಆರಾಧಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸುವ : ಪ್ರೊ.ಜ್ಞಾನೇಶ್

ನಮ್ಮ ಸಂಸ್ಕೃತಿ ಆಚರಣೆಗಳು ಆಧುನಿಕ ಯುವಗದಲ್ಲಿ ಕೈ ತಪ್ಪಿ ಹೋಗುವ ಸಾಧ್ಯತ್ಯೆಯಿದ್ದು ನಾವು ಅದರ ಯಾವುದೇ ಅಮಿಷಕ್ಕೆ ಒಳಗಾಗದೆ ದೇವರನ್ನು ಆರಾಧಿಸುವ ಮೂಲಕ ನಮ್ಮ ಸಂಸ್ಕೃತಿ ನಮ್ಮ ತನವನ್ನು ಉಳಿಸಿಕೊಳ್ಳುವ ಎಂದು ಸುಳ್ಯ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಜ್ಞಾನೇಶ್ ಹೇಳಿದರು.


ಅವರು ಅಜ್ಜಾವರದ ದೇವರಕಳಿಯ ಚೈತನ್ಯ ಸೇವಾಶ್ರಮದದಲ್ಲಿ ಶಿವರಾತ್ರಿ ಅಂಗವಾಗಿ ನಡೆದ ಭಜನಾ ಹಾಗೂ ಮಂತ್ರೋಪದೇಶ ಮತ್ತು ಭಜನಾ ಕಾರ್ಯಕ್ರಮದ ಬಳಿಕ ನಡೆದ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿಯವರ ಬದುಕಿಕೊಂದು ಅರ್ಥ ಇದೆ ಮತ್ತು ಮಹಿಳಾ ಶೋಷಣೆ ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ನಂತರ ನಡೆದ ಸಭ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಸಮಾಜದ ಅತ್ಯಂತ ಹಿಂದುಗಳಿದ ಜನರ ಮಕ್ಕಳಿಗೆ ಮಂತ್ರೋಪದೇಶ ಮಾಡುವ ಕೆಲಸ ಆಶ್ರಮದಲ್ಲಿ ನಡೆದಿದೆ.ಮಕ್ಕಳಿಗೆ ಮಂತ್ರ ಬೋಧನೆ ಮಾಡಿರುವುದು ಸ್ವಾಮೀಜಿಯವರ ಒಂದು ಒಳ್ಳೆ ಕಾರ್ಯವಾಗಿದೆ. ಜಾತಿಯನ್ನು ನಾವೇ ಸೃಷ್ಟಿ ಮಾಡಿಕೊಂಡಿರುವುದು. ಅದು ವೃತ್ತಿಯ ಮೂಲಕ ಹುಟ್ಟಿಕೊಂಡಿದೆ. ಈಗ ಜಾತಿ ಹೆಸರಲ್ಲಿ ಜಗಳ ಸಲ್ಲದು ಎಂದು ಅವರು ಹೇಳಿದರು.
ಆರ್ಶೀವಚನ ನೀಡಿದ ಆಶ್ರಮದ ಶ್ರೀ ಯೋಗೇಸ್ವರಾನಂದ ಸ್ವಾಮೀಜಿ ಮಾತನಾಡಿ ಶಿವರಾತ್ರಿ ಎಂದರೆ ಶುಭರಾತ್ರಿ,ಶುಭದಿನ. ಇಂದು ಸಮಾಜದಲ್ಲಿ ಅಹಿತಕರ ಘಟನೆ ನಡೆಯುತ್ತಿದ್ದು ಸಮಾಜ ಕೆಟ್ಟಿದೆ.ತ್ಯಾಜಗದ ಮನೋಭಾವನೆಯಿಂದ ಸಮಾಜವನ್ನು ಸರಿಮಾಡಬಹುದು. ಎಲ್ಲಾರು ತ್ಯಾಗಿಗಳಾದ ಸಮಾಜ ಬದಲಾವಣೆಯಾಗುತ್ತದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ವೈದ್ಯೆ ಸಾಯಿ ಗೀತಾ, ಪಾರೆಸ್ಟರ್ ವೆಂಕಪ್ಪ ನಾಯ್ಕ ಭಾಗವಹಿಸಿದರು.
ಶಿಕ್ಷಕಿ ಪ್ರಣವಿ ಸ್ವಾಗತಿಸಿದರು. ಉಪನ್ಯಾಸಕಿ ರೇಖಾ ನಿರೂಪಿಸಿ ಉಪನ್ಯಾಸಕ ಅನಿಲ್ ಬಿ.ವಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.