ಹಾಲೆಮಜಲಿನಲ್ಲಿ ಅರೆಭಾಷೆ ಸಾಂಸ್ಕೃತಿಕ ಜನಪದ ವೈಭವ

Advt_Headding_Middle
Advt_Headding_Middle

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ ವತಿಯಿಂದ ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ (ರಿ.) ನಾಲ್ಕೂರು ಒಕ್ಕೂಟಗಳ ಸಹಕಾರದೊಂದಿಗೆ ಅರೆಭಾಷೆ ಸಾಂಸ್ಕೃತಿಕ ಜನಪದ ವೈಭವ ಹಾಲೆಮಜಲಿನ ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ಮಾ. 3ರಂದು ನಡೆಯಿತು.

ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ ಅಧ್ಯಕ್ಷತೆ ವಹಿಸಿದ್ದರು. ನಾಟಿ ವೈದ್ಯೆ ಶ್ರೀಮತಿ ಪುಷ್ಪಾವತಿ ದೇವಿದಾಸ್ ಬುಡ್ಲೆಗುತ್ತು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ನಿರ್ದೇಶಕ ಚಂದ್ರಶೇಖರ ನೆಲ್ಯಾಡಿ, ಭುವನೇಶ್ವರ ಗೌಡ ಹುಲ್ಕುಮೇರಿ, ಸತೀಶ್ ಬೊಂಬುಳಿ, ಜಯಂತಿ ಉಂಞಣ ಮನೆ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಅಕಾಡೆಮಿ ಸದಸ್ಯ ಎ.ಕೆ.ಹಿಮಕರ, ಪರಶುರಾಮ ಚಿಲ್ತಡ್ಕ ಉಪಸ್ಥಿತರಿದ್ದರು.

 

ಈ ಸಂದರ್ಭದಲ್ಲಿ ವಾಸ್ತು ಸಲಹೆಗಾರ, ನಾಟಿ ವೈದ್ಯ ಎಸ್. ಮಣಿ ಮುಂಡೋಡಿ ಹಾಗೂ ನಾಟಿ ವೈದ್ಯೆ ಶ್ರೀಮತಿ ಪುಷ್ಪಾವತಿ ದೇವಿದಾಸ್ ಬುಡ್ಲೆಗುತ್ತುರವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಬೆಂಡೋಡಿ, ಹರಿಹರ, ಜ್ಞಾನದೀಪ ಎಲಿಮಲೆ ಶಾಲಾ ಗ್ರಂಥಾಲಯಗಳಿಗೆ ಅಕಾಡೆಮಿ ಪ್ರಕಟಿತ ಪುಸ್ತಕಗಳನ್ನು ನೀಡಲಾಯಿತು. ಸಭಾ ಕಾರ್ಯಕ್ರಮದ ನಂತರ ಕೊಲ್ಲಮೊಗ್ರ ಮಹಿಳಾ ತಂಡದವರಿಂದ ಸಿದ್ಧವೇಶ, ಮಡಿಕೇರಿಯ ಅನೀಶ್ ಮತ್ತು ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಕಾಡೆಮಿ ಸದಸ್ಯ ದಿನೇಶ್ ಹಾಲೆಮಜಲು ಸ್ವಾಗತಿಸಿ, ಪರಶುರಾಮ ಚಿಲ್ತಡ್ಕ ವಂದಿಸಿದರು. ಹರೀಶ್ಚಂದ್ರ ಕುಳ್ಳಂಪಾಡಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.