Breaking News

ಬೆಳ್ಳಾರೆ ಗ್ರಾಮ ಪಂಚಾಯತ್ ನಿಂದ ವಿನೂತನ ಕಾರ್ಯಕ್ರಮ, ಕಾಲನಿಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Advt_Headding_Middle
Advt_Headding_Middle

ಬೆಳ್ಳಾರೆ ಗ್ರಾಮ ಪಂಚಾಯತ್ ವತಿಯಿಂದ ಕಾಲನಿಗಳಲ್ಲಿ ಉಚಿತ ಆರೋಗ್ಯ ತಪಾಸಣೆಗಳನ್ನು ನಡೆಸುವುದರ ಮುಖಾಂತರ ವಿನೂತನ ಕಾರ್ಯಕ್ರಮ ನಡೆಯಿತು.

ಮಾ.2 ರಂದು ಪಾಟಾಜೆ ಕಾಲನಿ ಮತ್ತು ದರ್ಖಾಸ್ತು ಕಾಲನಿಗಳಲ್ಲಿ ಆರೋಗ್ಯ ತಪಾಸಣಾ ಕಾರ್ಯಕ್ರಮವು ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಕುಂತಳಾ ನಾಗರಾಜ್ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಮ್ಮದ್ ಮುಸ್ತಾಫ, ಗ್ರಾಮ ಪಂಚಾಯತ್ ಸದಸ್ಯ ಎನ್.ಎಸ್.ಡಿ.ವಿಠಲದಾಸ್, ಡಾ.ಮಂಜುನಾಥ್,ಡಾ.ಅಶ್ವತಿ ಮತ್ತು ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಭವ್ಯ,ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪಾಟಜೆ ಕಾಲನಿಯವರಿಗೆ ಪಾಟಜೆ ಶಾಲೆಯಲ್ಲಿ ತಪಾಸಣೆ ನಡೆಯಿತು.
ಸುಮಾರು 40 ಮಂದಿ ಜನರು ಆರೋಗ್ಯ ತಪಾಸಣಾ ಮಾಡಿಸಿಕೊಂಡರು.

ದರ್ಖಾಸ್ತು ಕಾಲನಿಯವರಿಗೆ ದರ್ಖಾಸ್ತು ಶಾಲೆಯಲ್ಲಿ ಶಿಬಿರ ಏರ್ಪಡಿಸಲಾಯಿತು. ಸುಮಾರು 60 ಜನರು ತಪಾಸಣೆ ಮಾಡಿಸಿಕೊಂಡರು.ಪಂಚಾಯತ್ ವತಿಯಿಂದ ಪ.ಜಾತಿ,ಪ.ಪಂ ದವರಿಗೆ ಶೇ 25 ಮೀಸಲಿರಿಸಿದ ಅನುದಾನದಲ್ಲಿ ಶಿಬಿರ ಏರ್ಪಡಿಸಲಾಯಿತು.

ಪಂಜ ಆರೋಗ್ಯ ಕೇಂದ್ರದ ಡಾ.ಮಂಜುನಾಥ್, ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಅಶ್ವತಿ, ಆರೋಗ್ಯ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ತಪಾಸಣೆಯಲ್ಲಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.