Breaking News

ನಾಗಪಟ್ಟಣ ಶ್ರೀ ಸದಾಶಿವ ದೇವಳದಲ್ಲಿ ಮಹಾಶಿವರಾತ್ರಿ ಉತ್ಸವ

Advt_Headding_Middle
Advt_Headding_Middle


ಆಲೆಟ್ಟಿ ಗ್ರಾಮದ ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಾ.4 ರಂದು ಮಹಾಶಿವರಾತ್ರಿ ಉತ್ಸವವು ಜರಗಿತು. ಪೂರ್ವಾಹ್ನ ಪ್ರಧಾನ ಆರ್ಚಕರಾದ ಶ್ರೀ ಕೃಷ್ಣ ಕೆದಿಲಾಯರವರ ನೇತೃತ್ವದಲ್ಲಿ ಉಷಾಪೂಜೆಯಾಗಿ ವಿಶೇಷವಾಗಿ ಏಕಾದಶರುದ್ರಾಭಿಷೇಕ ಸೇವೆಯು ನಡೆಯಿತು.

ಮಧ್ಯಾಹ್ನ ಮಹಾಪೂಜೆ ನಂತರ ಪ್ರಸಾದ ವಿತರಣೆಯಾಗಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನೆರವೇರಿತು. ಸಂಜೆ ದೀಪಾರಾಧನೆಯಾಗಿ ಶಾಸ್ತಾವೇಶ್ವರ ಭಜನಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆದು ಮಂಗಳಾಚರಣೆಯ ನಂತರ ಪೂಜೆಯ ಬಳಿಕ ಪ್ರಸಾದ ವಿತರಣೆಯಾಯಿತು. ಊರಿನ ಪರ ಊರಿನ ಭಕ್ತಾದಿಗಳು ಸಾವಿರಾರು ಮಂದಿ ಆಗಮಿಸಿದ್ದರು. ದೇವಳದ ವ್ಯ.ಸ.ಅಧ್ಯಕ್ಷ ದಾಮೋದರ ನಾರ್ಕೋಡು ಮತ್ತು ಸದಸ್ಯರು ಸರ್ವರನ್ನೂ ಸ್ವಾಗತಿಸಿದರು. ಸ್ಥಳೀಯ ಸಂಘ ಸಂಸ್ಥೆಯವರು ಸ್ವಯಂ ಸೇವಕರಾಗಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.