Breaking News

ಆಲೆಟ್ಟಿ ಸದಾಶಿವ ದೇವಳದಲ್ಲಿ ಮಹಾಶಿವರಾತ್ರಿ ಮತ್ತು ಏಕಾಹ ಭಜನೆ

Advt_Headding_Middle
Advt_Headding_Middle

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಾ.4 ರಂದು ಮಹಾಶಿವರಾತ್ರಿ ಉತ್ಸವ ಹಾಗೂ ಏಕಾಹ ಭಜನೆಯು ಜರಗಿತು.
ಪ್ರಾತ:ಕಾಲದಲ್ಲಿ ಪ್ರಧಾನ ಅರ್ಚಕರಾದ ಸುಪ್ರೀಮ್ ಭಟ್ ರವರು ದೀಪಾರಾಧನೆ ಮಾಡಿ ಅಹರ್ನಿಶಿ 24 ಗಂಟೆಗಳ ಕಾಲ ನಡೆಯುವ ಭಜನಾ ಸೇವೆಗೆ ಚಾಲನೆ ನೀಡಿದರು. ಪೂರ್ವಾಹ್ನ ಪೂಜೆಯ ನಂತರ ವಿಶೇಷವಾಗಿ ಏಕಾದಶರುದ್ರಾಭಿಷೇಕ ಸೇವೆಯು ನಡೆಯಿತು. ಈ ಸಂದರ್ಭದಲ್ಲಿ ರುದ್ರಪಾರಾಯಣವನ್ನು ಭಾರಧ್ವಾಜಾಶ್ರಮದ ವಿದ್ಯಾರ್ಥಿಗಳು ನೆರವೇರಿಸಿದರು. ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯ ಬಳಿಕ ಸಾರ್ವಜನಿಕವಾಗಿ ಅನ್ನಸಂತರ್ಪಣೆ ನೆರವೇರಿತು. ರಾತ್ರಿ ವಿಶೇಷವಾಗಿ ರಂಗಪೂಜೆಯು ನಡೆದ ನಂತರ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಯಿತು. ಪ್ರಾತ:ಕಾಲದಲ್ಲಿ ಅರ್ಚಕರ ನೇತೃತ್ವದಲ್ಲಿ ದೀಪ ವಿಸರ್ಜನೆಯಾಗಿ ಮಹಾಮಂಗಳಾರತಿಯಾಗಿ ಪ್ರಸಾದ ವಿತರಿಸಲಾಯಿತು. ಏಕಾಹ ಭಜನೆಯಲ್ಲಿ ಸ್ಥಳೀಯ ಹಾಗೂ ತಾಲೂಕಿನ ವಿವಿಧ ಭಜನಾ ತಂಡದ ಸದಸ್ಯರು ಆಗಮಿಸಿ ಸೇವೆಯಲ್ಲಿ ತೊಡಗಿಸಿಕೊಂಡರು. ಊರಿನ ಹಾಗೂ ಪರಊರಿನ ಭಗವದ್ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ವ್ಯ.ಸಮಿತಿ ಅಧ್ರಕ್ಷ ಕೆ.ಸಿ.ಪ್ರಸನ್ನ ಬಡ್ಡಡ್ಕ ಮತ್ತು ಸದಸ್ಯರು, ಭಜನಾ ಸಂಘದ ಅಧ್ಯಕ್ಷ ಅಚ್ಚುತ್ತ ಮಣಿಯಾಣಿ ಆಲೆಟ್ಟಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸ್ಥಳೀಯ ಸಂಘದ ಸದಸ್ಯರು ಸ್ವಯಂಸೇವಕರಾಗಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.