ಮಾ. 23: ಚೆಮ್ನೂರು ಕುಟುಂಬದ ತರವಾಡು ಮನೆಯ ಗೃಹಪ್ರವೇಶ

Advt_Headding_Middle
Advt_Headding_Middle

ಐವರ್ನಾಡು ಗ್ರಾಮದ ಚೆಮ್ನೂರು ಕುಟುಂಬದ ತರವಾಡು ಮನೆಯ ಗೃಹಪ್ರವೇಶ ಮಾ.23 ರಂದು ಕುಂಟಾರು ಬ್ರಹ್ಮ ಶ್ರೀ ರವೀಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಮಾ.22 ರಂದು ಸಂಜೆ ಗಂಟೆ 5-00 ಕ್ಕೆ ತಂತ್ರಿಗಳ ಆಗಮನ,ರಾತ್ರಿ ಗಂಟೆ 7-00 ರಿಂದ ಪುಣ್ಯಾಹವಾಚನ,ಸ್ಥಳ ಶುದ್ಧಿ,ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ,ವಾಸ್ತುಹೋಮ, ವಾಸ್ತುಬಲಿ, ವಾಸ್ತು ಪುಣ್ಯಾಹಾಂತ ನಡೆಯಲಿದೆ.

ಮಾ.23 ರಂದು ಪೂರ್ವಾಹ್ನ ಗಂಟೆ 8-oo ರಿಂದ ಗಣಪತಿ ಹೋಮ, ಬೆಳಿಗ್ಗೆ ಗಂಟೆ 11-55 ಕ್ಕೆ ಗೃಹಪ್ರವೇಶ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ‌ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಿ.ಎಚ್.ತಿಮ್ಮಪ್ಪ ಗೌಡ ಮತ್ತು ಕುಟುಂಬದ ಹಿರಿಯರಾದ ಚೆಮ್ನೂರು ದಾಮೋದರ ಗೌಡ,ಚೆಮ್ನೂರು ಸುಬ್ಬಪ್ಪ ಗೌಡ,ಚೆಮ್ನೂರು ಕೊರಗಪ್ಪ ಗೌಡರವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.