ಜಾಲ್ಸೂರು: ಬಿ.ಎಂ.ಎಸ್. ಅಟೋರಿಕ್ಷಾ ಚಾಲಕ ಸಂಘದ ವಾರ್ಷಿಕ ಮಹಾಸಭೆ

Advt_Headding_Middle
Advt_Headding_Middle

ಜಾಲ್ಸೂರಿನ ಬಿ.ಎಂ.ಎಸ್.ಅಟೋರಿಕ್ಷಾ ಚಾಲಕರ ಸಂಘದ ವಾರ್ಷಿಕ ಮಹಾಸಭೆಯು ಜಾಲ್ಸೂರು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಮಾ.1 ರಂದು ಜರುಗಿತು.


ಜಾಲ್ಸೂರು ರಿಕ್ಷಾ ಚಾಲಕರ ಘಟಕದ ಅಧ್ಯಕ್ಷ ಗೋಪಾಲ ವಿ.ಪದವು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಅಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ , ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ, ಕೋಶಾಧಿಕಾರಿ ಗಿರೀಶ್, ಜಾಲ್ಸೂರಿನ ಯುವ ಉದ್ಯಮಿ ನಿಶಾಂತ್ ಮೋಂಟಡ್ಕ, ಗ್ರಾ.ಪಂ.ಸದಸ್ಯರುಗಳಾದ ಜನಾರ್ದನ ಆಚಾರ್ಯ ಜಾಲ್ಸೂರು, ಎಂ.ಎಸ್.ದಯಾನಂದ ಮಹಾಬಲಡ್ಕ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ಜಾಲ್ಸೂರು ಘಟಕವನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಗೋಪಾಲ ವಿ.ಪದವು ಮರು ಆಯ್ಕೆಯಾದರೆ, ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಕುಮಾರ್ ಮಹಾಬಲಡ್ಕ, ಉಪಾಧ್ಯಕ್ಷರಾಗಿ ಕರುಣಾಕರ ಕಾಡುಸೊರಂಜ, ಜತೆ ಕಾರ್ಯದರ್ಶಿಯಾಗಿ ತಿಲಕ ಬೆಳ್ಳಿಪ್ಪಾಡಿ, ಕೋಶಾಧಿಕಾರಿಯಾಗಿ ಸತ್ಯಕುಮಾರ್ ದೇರ್ಕಜೆ, ಕನಕಮಜಲು ಸಂಘಟನಾ ಕಾರ್ಯದರ್ಶಿಯಾಗಿ ಜನಾರ್ದನ ಆಚಾರ್ಯ ಜಾಲ್ಸೂರು ಆಯ್ಕೆಗೊಂಡರು. ನಿರ್ದೇಶಕರುಗಳಾಗಿ ಮಂಜುನಾಥ ಪದವು, ಪ್ರಕಾಶ್ ಬೆಳ್ಳಿಪ್ಪಾಡಿ, ನಾಗೇಶ್ ಬಾಳೆಹಿತ್ಲು, ಕನಕಮಜಲು ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.