Breaking News

ಮಾ- 19-20: ದುಗಲಡ್ಕ ದುಗ್ಗಲಾಯ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ

Advt_Headding_Middle
Advt_Headding_Middle

ದುಗಲಡ್ಕ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಶ್ರೀ ದುಗ್ಗಲಾಯ, ರುಧಿರ ಚಾಮುಂಡಿ, ನಾಗದೇವರು ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ ವು ಮಾ 19  ಮತ್ತು 20  ರಂದು ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ಮಾರ್ಗ ದರ್ಶನದಲ್ಲಿ , ಜೋಗಿಯಡ್ಕ ರಾಧಾಕೃಷ್ಣ ಭಟ್ಟರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ.

ಮಾ. 18 ರಂದು ಸಂಜೆ ಹಸಿರುವಾಣಿ ಮೆರವಣಿಗೆ, ಉಗ್ರಾಣ ತುಂಬಿಸುವುದು. ಮಾ 19 ರಂದು ಬೆಳಿಗ್ಗೆ ಗಣಪತಿ ಹವನ,ನಾಗದೇವರಿಗೆ ತಂಬಿಲ, ಚಾಮುಂಡಿ ಪರಿವಾರ ದೈವಗಳ ತಂಬಿಲ ಹಾಗೂ ಸತ್ಯನಾರಾಯಣ ದೇವರ ಪೂಜೆ ನಡೆಯಲಿದೆ. ಮಧ್ಯಾಹ್ನ ಮಂಗಳಾರತಿ , ಪ್ರಸಾದ ವಿತರಣೆ , ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ನಡುಬೆಟ್ಟು ಚಾವಡಿಯಿಂದ ದುಗಲಡ್ಕ ಮೂಲಸ್ಥಾನಕ್ಕೆ ದೈವಗಳ ಭಂಡಾರ ಬರಲಿದೆ. ರಾತ್ರಿ 9ರಿಂದ ರುಧಿರ ಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಅಂದು ರಾತ್ರಿ 8 ಕ್ಕೆ ಧಾರ್ಮಿಕ ಉಪನ್ಯಾಸ ಕಾರ್ಯ ಕ್ರಮ ನಡೆಯಲಿದ್ದು ಉಪನ್ಯಾಸಕರಾದ ಪೂರ್ಣ ಆತ್ಮರಾಮ ಮಾತನಾಡಲಿದ್ದಾರೆ. ರಾತ್ರಿ ಶ್ರೀ ಕೊದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
ಮಾ 20 ರಂದು ಬೆಳಿಗ್ಗೆ ಶ್ರೀ ದುಗ್ಗಲಾಯ ದೈವದ ನೇಮೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.