ದಮಾಮಿನಲ್ಲಿ ದಾರುಲ್ ಐತೆಮ್ ವಲ್ ಮಸಾಕೀನ್ ಸಮಿತಿಯ ವಾರ್ಷಿಕ ಮಹಾಸಭೆ

Advt_Headding_Middle
Advt_Headding_Middle

ಸುಳ್ಯ ತಾಲೂಕಿನ ಅನ್ಸಾರಿಯ ಯತೀಂ ಖಾನ ಹಾಗೂ ಬಡಮಕ್ಕಳ ಏಳಿಗೆಗಾಗಿ ಸುಮಾರು 23 ವರ್ಷಗಳ ಮೊದಲು ದಮಾಮಿನಲ್ಲಿ ರೂಪಿಕರಿಸಲಾದ ದಾರುಲ್ ಐತೆಮ್ ವಲ್ ಮಸಾಕೀನ್ ಸಮಿತಿ (ಪೂರ್ವ ಪ್ರಾಂತ್ಯ, ಸೌದಿ ಅರೇಬಿಯಾ) ಇದರ 23 ನೇ ವಾರ್ಷಿಕ ಮಹಾಸಭೆಯು ಮಾರ್ಚ್ 8  ರಂದು ಶಮ್ಸ್ ಸಿ.ಪಿ ರವರ ವಸತಿ ಹಾಲ್ ನಲ್ಲಿ ನಡೆಯಿತು.

ಶಮ್ಸ್ ಸಿ.ಪಿ ರವರ ಅಧ್ಯಕ್ಷತೆಯನ್ನು ವಹಿಸಿದರು ಮತ್ತು ಹಂಝ ಅಮಾನಿರವರು ಉದ್ಘಾಟನೆಯನ್ನು ನೆರವೇರಿಸಿ ಸಮುದಾಯಕ್ಕೆ ಸಮಿತಿಯ ಕೊಡುಗೆಗಳ ಬಗ್ಗೆ ಪ್ರಶಂಸಿದರು. ಅಶ್ರಫ್ ಏನ್.ಎಂ ರವರು ಸ್ವಾಗತಗೈದು ಇಸ್ಫ್ಯಾಕ್ ಕದಿಕಡ್ಕರವರು ಕಿರಾಅತ್ ಪಾರಾಯಣ ಮಾಡಿದರು. ತದನಂತರ ಪ್ರ.ಕಾರ್ಯದರ್ಶಿಗಳಾದ ಸಲೀಂ ಇಸ್ಮಾಯಿಲ್ ರವರು ಪ್ರಸ್ತುತ ವರ್ಷದ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿ ಅಂಗೀಕರಿಸಲಾಯಿತು, ನಂತರ ಂಉಅಅ ಯ ಅಧ್ಯಕ್ಷರಾದ ಸಿ.ಪಿ ಶಮ್ಸ್ ರವರು ಸಮಿತಿ ಕೈಗೊಂಡಿರುವ “ಶಾದಿಮಹಲ್” ಯೋಜನೆಯ ಬಗ್ಗೆ ವಿವರಣೆ ನೀಡಿದರು. ನಂತರ ನೂತನ ಸಮಿತಿ ರಚಿಸಲಾಯಿತು. ೨೦೧೯ -೨೦ ನೇ ಸಾಲಿನ ಕಾರ್ಯಕಾರಿ ಸಮಿತಿ ಕೆಳಕಂಡಂತಿದೆ,

ಗೌರಾವಾದ್ಯಕ್ಷರಾಗಿ ಇಬ್ರಾಹಿಂ ನಡುಬೈಲ್ , ಅಧ್ಯಕ್ಷರಾಗಿ ರಫೀಕ್ ಕದಿಕಡ್ಕ, ಉಪಾದ್ಯಕ್ಷರಾಗಿ ರಶೀದ್ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿಯಾಗಿ ಷರೀಫ್ ಮೇನಾಲ., ಸಂಘಟನಾ ಕಾರ್ಯದರ್ಶಿಯಾಗಿ ಅಶ್ರಫ್ ಮರಸಂಕ & ಸೆಲೀಂ ಇಸ್ಮಾಯಿಲ್.

ಕಾರ್ಯದರ್ಶಿಗಳಾಗಿ ಇಸ್ಫ್ಯಾಕ್ ಕದಿಕಡ್ಕ , ರಿಷನ್ ಅಡ್ಕಾರ್, ಅಹ್ಮದ್ ರಾಶಿದ್ ಏ.ಕೆ, ಕೋಶಾಧಿಕಾರಿಯಾಗಿ ಅಶ್ರಫ್ ಅಡ್ಕಾರ್(ತ್ರ್ಯೆಸ್ಟಾರ್) ರನ್ನು ನೇಮಿಸಲಾಯಿತು.

ಹಾಗೂ ಹಿರಿಯ ಸಲಹೆಗಾರರಾಗಿ ಅಶ್ರಫ್ ಅಡ್ಕಾರ್, ಶಮ್ಸ್ ಸಿ.ಪಿ ರವರನ್ನು ಆರಿಸಲಾಯಿತು ಮತ್ತು ಸಮಿತಿಯ ಹಲವು ಉಸ್ತುವಾರಿ ಸ್ಥಾನಗಳನ್ನು ಶಮೀರ್ ಅಡ್ಕಾರ್, ಶಾಜಿ ಗುರಂಪು, ಅಶ್ರಫ್ ಮಲ್ಲಕೂಟ ಮತ್ತು ಹಮೀದ್ ನಬಾತ್ ರವರಿಗೆ ಕೊಡಲಾಯಿತು ಬಳಿಕ ವರದಿವರ್ಷದಲ್ಲಿ ನಡೆಸಳುದ್ದೀಶಿಸಿದ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ಹಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.