Breaking News

ಕಜೆಮೂಲೆ ಕುಟುಂಬಸ್ಥರ ಭೂಮಿ ದೈವಗಳ ಪ್ರತಿಷ್ಠೆ , ಬ್ರಹ್ಮಕಲಶೋತ್ಸವ

Advt_Headding_Middle
Advt_Headding_Middle

ಕಜೆಮೂಲೆ ಕುಟುಂಬಸ್ಥರ ಶ್ರೀ ನಾಗದೇವರು ಹಾಗೂ ಭೂಮಿ ದೈವಗಳಾದ ಕುಪ್ಪೆ ಪಂಜುರ್ಲಿ, ಪಾಷಾಣಮೂರ್ತಿ ,ಗುಳಿಗ ದೈವಗಳ ಪುನರ್ ಪ್ರತಿಷ್ಠೆ ,ಬ್ರಹ್ಮಕಲಾಶಾಭಿಷೇಕ ಹಾಗೂ ನೇಮೋತ್ಸವವು ಮಾ. 7 ಮತ್ತು ಮಾ.8 ರಂದು ನಡೆಯಿತು. 

ಮಾ.7 ರ ಸಂಜೆ ದೇವತಾ ಪ್ರಾರ್ಥನೆ ,ಆಚಾರ್ಯ ವರಣ ,ಪುಣ್ಯಾಹವಾಚನ ,ಸುದರ್ಶನ ಹೋಮ ,ಪ್ರೇತವಾಹನೆ ,ಬಾಧಾಮೂರ್ತಿಗಳ ಆವಾಹನೆ ,ಉಚ್ಚಾಟನೆ ,ಉಚ್ಚಾಟನೆ ಬಲಿ ,ಸ್ಥಳ ಶುದ್ಧಿ ,ಪ್ರಾಸಾದ ಶುದ್ಧಿ ,ರಾಕ್ಷೋಘ್ನ ಹೋಮ ,ವಾಸ್ತು ಹೋಮ ,ವಾಸ್ತು ಬಲಿ ,ವಾಸು ಪುಣ್ಯಾಹಾಂತ ನಡೆದು ಅನ್ನಸಂತರ್ಪಣೆ ನಡೆಯಿತು.

ಮಾ.8 ರಂದು ಗಣಪತಿಹೋಮ ,ಬ್ರಹ್ಮಕಲಶ ಪೂಜೆ ,ಪೂರ್ವಾಹ್ನ ಶ್ರೀ ನಾಗದೇವರು ಹಾಗೂ ಕುಪ್ಪೆ ಪಂಜುರ್ಲಿ ,ಪಾಷಾಣಮೂರ್ತಿ ,ಗುಳಿಗ ದೈವಗಳ ಪ್ರತಿಷ್ಠೆ ,ಬ್ರಹ್ಮಕಲಶಾಭಿಷೇಕ , ಪೂಜೆ ,ನಿತ್ಯ ನೈಮಿತ್ತ್ಯಾದಿಗಳ ನಿರ್ಣಯ ,ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೈವಗಳ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆಯಿತು. ಬಳಿಕ ಪಾಷಾಣಮೂರ್ತಿ ,ಕುಪ್ಪೆಪಂಜುರ್ಲಿ‌,ಗುಳಿಗ ದೈವಗಳ ನೇಮೋತ್ಸವ ನಡೆಯಿತು. ವೈದಿಕ ಕಾರ್ಯಕ್ರಮದ ನೇತೃತ್ವವನ್ನು ಕುಂಟಾರು ವಾಸುದೇವ ಮತ್ತು ರವೀಶ ತಂತ್ರಿಗಳು ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.