Breaking News

ಮಾ. 14: ಕೊಡಿಯಾಲದಲ್ಲಿ ವಿಶ್ವಕರ್ಮ ಪೂಜೆ, ಧಾರ್ಮಿಕ ಉಪನ್ಯಾಸ

Advt_Headding_Middle
Advt_Headding_Middle

ಶ್ರೀ ವಿಶ್ವಕರ್ಮ ಭಜನಾ ಮಂಡಳಿ ನಿಡ್ಮಾರು ಕೊಡಿಯಾಲ ಇದರ 17ನೇ ವರ್ಷದ ವಾರ್ಷಿಕೋತ್ಸವ, ಶ್ರೀ ವಿಶ್ವಕರ್ಮ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಭಜನಾ ಕಾರ್ಯಕ್ರಮ ಮಾ. 14ರಂದು ಕೊಡಿಯಾಲ ಗ್ರಾಮದ ನಿಡ್ಮಾರು ಮಂಡಳಿ ನಿವೇಶನದಲ್ಲಿ ನಡೆಯಲಿದೆ.

ಮಾ. 14 ರಂದು ಪೂ. 8.೦೦ ಗಂಟೆಗೆ ವಿಶ್ವಕರ್ಮ ಪೂಜೆ ಆರಂಭಗೊಳ್ಳಲಿದೆ. ಪೂ. 11.೦೦ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀಮತಿ ತ್ರವೇಣಿ ವಿಶ್ವೇಶ್ವರ ಪುರೋಹಿತ್ ಬಾಳಿಲ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿಶ್ವಕರ್ಮ ಭಜನಾ ಮಂಡಳಿ ನಿಡ್ಮಾರು ಇದರ ಅಧ್ಯಕ್ಷ ಮಧುಚಂದ್ರ ಆಚಾರ್ಯ ಪಂಜ ವಹಿಸಲಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ರಾಜ್ಯಾಧ್ಯಕ್ಷ ಬಾಲಕೃಷ್ಣ ಪುತ್ಯ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಜಯಾ ಬ್ಯಾಂಕ್ ಉದ್ಯೋಗಿ ವಿಶ್ವನಾಥ ರೈ ತಡಗಜೆ ಮತ್ತು ಮರದ ಕೆಲಸಗಾರ ಯಶೋಧ ಪದ್ಮನಾಭ ಆಚಾರ್ಯ ಕಲ್ಲುಮುಟ್ಲುರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಮಧ್ಯಾಹ್ನ 12.3೦ಕ್ಕೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.೦೦ ಗಂಟೆಯಿಂದ ಭಜನಾ ಕಾರ್ಯಕ್ರಮ ನಡೆದು ರಾತ್ರಿ 12.೦೦ ಗಂಟೆಗೆ ಭಜನಾ ಮಂಗಲೋತ್ಸವ ಜರಗಲಿದೆ.

ಸಮಿತಿಯ ಅಧ್ಯಕ್ಷರಾಗಿ ಕೆ.ಹೆಚ್. ಮಧುಚಂದ್ರ ಪಂಜ, ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ಎಂ.ಆರ್, ಉಪಾಧ್ಯಕ್ಷರಾಗಿ ದಿನೇಶ್ ಬಾಚೋಡಿ, ಕಾರ್ಯದರ್ಶಿಯಾಗಿ ಗೋವರ್ಧನ ಕಲ್ಲಗದ್ದೆ, ಕೋಶಾಧಿಕಾರಿಯಾಗಿ ಶೇಷಪ್ಪ ಆಚಾರ್ಯ ನಿಡ್ಮಾರು ಹಾಗೂ ಶ್ರೀ ವಿಶ್ವಕರ್ಮ ಭಜನಾ ಮಂಡಳಿಯ ಸರ್ವಸದಸ್ಯರ ಸಹಕಾರದೊಂದಿಗೆ ವಾರ್ಷಿಕೋತ್ಸವ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.