ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ಯಾತ್ರಾರ್ಥಿಗಳ ಕಾರು ಅಪಘಾತ, ನಾಲ್ವರು ಮೃತ್ಯು

Advt_Headding_Middle
Advt_Headding_Middle

ಬೆಂಗಳೂರು ಕಡೆಯಿಂದ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ಯಾತ್ರಾರ್ಥಿಗಳ ಕಾರೊಂದು ಸಕಲೇಶಪುರದ ಮಾರನಹಳ್ಳಿ ಸಮೀಪ ಬಸ್‌ಗೆ ಢಿಕ್ಕಿ ಹೊಡೆದು ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.

 

ಗಾಯಗೊಂಡ ಕೆಲವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಆ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಸುಬ್ರಹ್ಮಣ್ಯ ಕ್ಷೇತ್ರದ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆಯವರು ಗಾಯಾಳುಗಳನ್ನು ಉಪಚರಿಸಿ 108 ಮತ್ತು ಪೊಲೀಸರಿಗೆ ಮಾಹಿತಿ ನೀಡಿ ಮಾನವೀಯತೆ ಮೆರೆದರು. ಇವರೊಂದಿಗೆ ಅಶೋಕ್ ನೆಕ್ರಾಜೆಯವರ ಕಾರು ಚಾಲಕ ಅಶೋಕ್ ಎಂಬವರೂ ಗಾಯಾಳುಗಳನ್ನು ಉಪಚರಿಸಲು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.