Breaking News

ನಟರಾಜ ನೃತ್ಯ ಕಲಾ ನಿಕೇತನ ಸುಳ್ಯ ಶಾಖೆಯ ಉದ್ಘಾಟನೆ 

Advt_Headding_Middle
Advt_Headding_Middle

ನಟರಾಜ ನೃತ್ಯ ಕಲಾ ನಿಕೇತನ ಸುಳ್ಯ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಮಾ. 10  ರಂದು ಸುಳ್ಯದ ಜಯಪ್ರಕಾಶ್ ಕಲ್ಲಗದ್ದೆಯವರ ಮಾಲಕತ್ವದ ದೇವಮ್ಮ ಕಾಂಪ್ಲೆಕ್ಸ್‌ನ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ಉಪನ್ಯಾಸಕ ದತ್ತಾತ್ರೆಯ ರಾವ್ ಮಡಂತ್ಯಾರು ನೆರವೇರಿಸಿದರು. ಅಧ್ಯಕ್ಷತೆಯನ್ನು ಜಯಪ್ರಕಾಶ್ ಕಲ್ಲಗದ್ದೆ ವಹಿಸಿದರು. ನೃತ್ಯಗುರುಗಳಾದ ಶ್ರೀಮತಿ ಇಂದುಮತಿ ನಾಗೇಶ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ದರು. ರೇಣುಕಾಕ್ಷ ಬಿ ಸಿ ರವರು ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳು ಹಾಗು ಪೋಷಕರು ಉಪಸ್ಥಿತರಿದ್ದರು. ಪ್ರತೀ ಸೋಮವಾರ ಸಂಜೆ 4 ರಿಂದ 5-30  ಗಂಟೆಯವರೆಗೆ ಭರತನಾಟ್ಯ ದ ಜೊತೆಗೆ ಲಘು ಶಾಸ್ತ್ರಿಯ ನೃತ್ಯ ಹಾಗು ಜಾನಪದ ನೃತ್ಯ ಗಳ ತರಬೇತಿ ನೀಡಲಾಗುವುದು ಎಂದು ನೃತ್ಯ ಗುರುಗಳಾದ ಶ್ರೀಮತಿ ಇಂದುಮತಿ ನಾಗೇಶ್ ರವರು ತಿಳಿಸಿರುತ್ತಾರೆ.

 

ಮಾಹಿತಿಗಾಗಿ :  ಮೊ. 9972963036, 9880221503

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.