Breaking News

ಸುಳ್ಯದಲ್ಲಿ ನಾಗನಿಧಿ ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ

Advt_Headding_Middle
Advt_Headding_Middle

ಯುವಕ ಯಕ್ಷ ಕಲಾ ರಂಗ ಸುಳ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಂಘ ಸುಳ್ಯ ಇದರ ಆಶ್ರಯದಲ್ಲಿ ನಾಗ ನಿಧಿ ಯಕ್ಷಗಾನ ಪ್ರದರ್ಶನ ಹಾಗೂ ಸನ್ಮಾನ ಕಾರ್ಯಕ್ರಮ ಮಾ.13ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯಿತು. ರಾತ್ರಿ ಸುಮಾರು 9ಗಂಟೆಗೆ ದೇವಸ್ಥಾನದ ಸಭಾಭವನದಲ್ಲಿ ಬಪ್ಪನಾಡು ಕ್ಷೇತ್ರದ ದೇವರ ಪೂಜೆ ನಡೆದ ಬಳಿಕ ರಂಗ ವೇದಿಕೆಯಲ್ಲಿ ನಾಗನಿಧಿ ಯಕ್ಷಗಾನ ಪ್ರದರ್ಶನಗೊಂಡಿತು. ರಾತ್ರಿ 10ಗಂಟೆಯಿಂದ ಬೆಳಗ್ಗಿನ ವರೆಗೆ ಯಕ್ಷಗಾನ ಪ್ರದರ್ಶನಗೊಂಡಿದ್ದು ನೂರಾರು ಸಂಖ್ಯೆಯಲ್ಲಿ ಯಕ್ಷ ಪ್ರೇಮಿಗಳು ಭಾಗವಹಿಸಿದ್ದರು.
ಸನ್ಮಾನ: ಯಕ್ಷಗಾನ ಭಾಗವತಿಕೆಯಲ್ಲಿ ಹೆಸರುಗಳಿಸಿರುವ ಗಿರೀಶ್ ರೈ ಕಕ್ಕೆಪದವುರನ್ನು ಯಕ್ಷಗಾನ ಸಂಘಟಕರ ವತಿಯಿಂದ ಅಭಿನಂದಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಕನ್ನಡ ಕಸ್ತೂರಿ ಪ್ರಶಸ್ತಿ ಪುರಸ್ಕಾರಗೊಂಡ ತೀರ್ಥರಾಮ ಹೊಸೊಳಿಕೆಯವರನ್ನು ಸನ್ಮಾನಿಸಲಾಯಿತು. ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಹಾಗೂ ಚೆನ್ನಕೇಶವ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೆಸರ ಹರಪ್ರಸಾದ್ ತುದಿಯಡ್ಕರವರು ಅಭಿನಂದನೆ ಹಾಗೂ ಸನ್ಮಾನವನ್ನು ನೆರವೇರಿಸಿದರು. ಸಹಕಾರಿ ಧುರೀಣ ಪಿ.ಬಿ.ದಿವಾಕರ ರೈ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಡಾ.ಸುಂದರ್ ಕೇನಾಜೆ ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು. ಯುವಕ ಯಕ್ಷ ಕಲಾ ರಂಗದ ಶೇಖರ ಮಣಿಯಾಣಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಂಘದ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಡ್ತಿಲ, ಪ್ರದಾನ ಕಾರ್ಯದರ್ಶಿ ರತ್ನಾಕರ ಕಲ್ಲುಮುಟ್ಲು, ಸಂಘಟನ ಕಾರ್ಯದರ್ಶಿ ಶಿವಪ್ರಸಾದ್ ಕಡೆವೆಪಳ್ಳ, ಪದಾಧಿಕಾರಿಗಳಾದ ಸನತ್ ಗೂನಡ್ಕ, ಪೃಥ್ವಿ ಚಿತ್ರದುರ್ಗ, ಶ್ರೀಮತಿ ಮಮತಾ ಯಜ್ಞ ನಾರಾಯಣ್, ವಸಂತ್ ದುಗಲಡ್ಕ, ಯೋಗೀಶ್, ಭರತ್ ಮೊದಲಾದವರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಣ ಸಂಯೋಜಕ ಕೇಶವ ಮಾಸ್ಟರ್ ಹೊಸಗದ್ದೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿವಪ್ರಸಾದ್ ಕಡವೆಪಳ್ಳ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.