ಪೆರಾಜೆ ವಜ್ರಪುರ ಪರಿಸರದಲ್ಲಿ ವ್ಯಾಪಕ ಅಕ್ರಮ ವಜ್ರಗಣಿಗಾರಿಕೆ-ಕಂದಾಯ, ಅರಣ್ಯ ಇಲಾಖೆಯ ನೇರ ಭಾಗಿ-ಕೊಡಗಿನ ಪ್ರಕೃತಿ ದುರಂತ ಆತಂಕದಲ್ಲಿ ಸ್ಥಳೀಯರು

Advt_Headding_Middle
Advt_Headding_Middle

ಪೆರಾಜೆ ವಜ್ರಪುರ ಪರಿಸರದಲ್ಲಿ ವ್ಯಾಪಕ ಅಕ್ರಮ ವಜ್ರಗಣಿಗಾರಿಕೆ ನಡೆಯುತ್ತಿದ್ದು, ಕಂದಾಯ, ಅರಣ್ಯ ಇಲಾಖೆಯ ನೇರ ಭಾಗಿಯಾಗಿದ್ದ ಆರೋಪಗಳು ಕೇಳಿಬರುತ್ತಿದೆ. ಮುಂದೆ ಕೊಡಗಿನಲ್ಲಿ ಪ್ರಕೃತಿ ದುರಂತ ಸಂಭವಿಸಿದಂತೆ ಇಲ್ಲಿಯೂ ಸಂಭವಿಸಬಹುದೆಂಬ ಆತಂಕದಲ್ಲಿ ಸ್ಥಳೀಯರಿದ್ದಾರೆ.
ದ.ಕ. ಮತ್ತು ಕೊಡಗು ಗಡಿಪ್ರದೇಶ, ಕೊಡಗು ವ್ಯಾಪ್ತಿಯ ಪೆರಾಜೆ ಗ್ರಾಮದ ಕುಂಡಾಡು ಮತ್ತು ಬಂಗಾರಕೋಡಿ ಮಧ್ಯ ಪ್ರದೇಶ ವಜ್ರಪುರದಲ್ಲಿ ಸುಮಾರು ೩ವರ್ಷಗಳಿಂದ ಅಕ್ರಮ ವಜ್ರ ಗಣಿಗಾರಿಕೆ ನಡೆಯುತ್ತಿದೆ.                                                ಗಣಿಗಾರಿಕೆಯ ಪ್ರದೇಶ
ವಜ್ರಪುರ ಎನ್ನುವ ಪ್ರದೇಶ ಸ್ಥಳೀಯ ಜನರ ಸ್ವಾಧೀನ ವಿದ್ದರೂ, ಸರಕಾರಿ ಜಾಗವಾಗಿದ್ದು, ಕೊಳಿಕ್ಕಮಲೆ ಬೆಟ್ಟದ ಕೆಳಗಿನ ಪ್ರದೇಶ. ಈ ಭಾಗದಲ್ಲಿ ಸಾಕಷ್ಟು ಜನವಸತಿಗಳಿವೆ. ಜನವಸತಿ ಪ್ರದೇಶದ ಮಧ್ಯದಲ್ಲಿ ಸುಮಾರು ೧೦ಸೆನ್ಸ್ ನಷ್ಟು ಸಮತಟ್ಟು ಮಾಡಲಾಗಿದೆ. ಸುಮಾರು ೨೦೦ಅಡಿ ಯಷ್ಟು ಆಳ ಗುಂಡಿ ತೆಗೆಯಲಾಗಿದ್ದು, ಗುಂಡಿಯೊಳಗೆ ನಾಲ್ಕು ಕಡೆಯಿಂದ ಸುರಂಗ ತೋಡಲಾಗಿದೆ ಅದನ್ನು ಕಳೆದ ವಾರವಷ್ಟೆ ಜೇಸಿಬಿ ಯಂತ್ರದ ಮೂಲಕ ಮುಚ್ಚಲಾಗಿದೆ.
ಮೂರು ವರ್ಷಗಳಿಂದ ಅಕ್ರಮ ವಜ್ರಗಣಿಗಾರಿಕೆ ಮಾಡಲಾಗುತ್ತಿದ್ದು, ಸ್ಥಳೀಯ ಮತ್ತು ಕಲ್ಲುಗುಂಡಿಯ ವ್ಯಕ್ತಿಗಳಿಬ್ಬರ ಮೂಲಕ ಮೈಸೂರಿನ ಮೂಲಕ ಹೊರರಾಜ್ಯಕ್ಕೆ ಸಾಗಾಟವಾಗುತ್ತಿದೆ. ವಜ್ರ ಅಪ್ಪಟ ವಜ್ರವಾಗಿದ್ದು, ೧ಕೆಜಿಗೆ ೧ಲಕ್ಷ ರೂ ಗಳಿದ್ದು, ಗಣಿಗಾರಿಕೆ ದಂಧೆಗೆ ಸ್ಥಳೀಯವಾಗಿ ವಾಸವಿರುವ ಜನರು ಮಾತ್ರ ಕಂಗಾಲಾಗಿದ್ದಾರೆ. ಈ ದಂಧೆಯಲ್ಲಿ ಶಾಮೀಲಾಗಿದ್ದ ವ್ಯಕ್ತಿಗಳು ಮಾತ್ರ ರಾತ್ರಿ ಯಂತ್ರಗಳ ಮೂಲಕ ಮಣ್ಣನ್ನು ತೆಗೆದು, ಕೂಲಿ ಕಾರ್ಮಿಕರ ಮೂಲಕ ವಜ್ರವನ್ನು ಹೊರತೆಗೆಯಲಾಗುತ್ತಿದೆ.
ಹಲವು ವರ್ಷಗಳ ಹಿಂದೆ ವಜ್ರ ವಿರುವ ಮಾಹಿತಿ ಇದ್ದು, ಆ ವೇಳೆ ವಜ್ರವನ್ನು ಅಗೆದು ತೆಗೆಯಲಾಗಿದೆ ಎಂದು ಹೇಳಲಾಗುತ್ತಿತ್ತು. ಇದೀಗ ಮೂರು ವರ್ಷಗಳಿಂದ ಮಾತ್ರ ನಿರಂತರ ಅಗೆದು ತೆಗೆಯಲಾಗುತ್ತಿದೆ.
ವಜ್ರ ಅಗೆಯುವಾಗ ಕ್ವಿಂಟಾಲ್ ಗಟ್ಟಲೆ ಸಿಗುತ್ತಿದೆ ಎನ್ನುವ ಮಾಹಿತಿ ಸ್ಥಳೀಯರಿಂದ ದೊರೆತಿದ್ದು, ಬಂಗಾರಕೋಡಿ ರಸ್ತೆಯ ಮೂಲಕ ಸಾಗಿಸಲಾಗುತ್ತಿದೆ. ಸಾಗಾಟ ರಾತ್ರಿಯೇ ನಡೆಯುತ್ತಿದ್ದು, ಅಗೆಯುವ ಕೆಲಸ ಹಗಲಿನಲ್ಲೂ ನಡೆಯುತ್ತಿದೆ.

                                               ಸ್ಥಳದಲ್ಲಿ ಸಿಕ್ಕಿರುವ ವಜ್ರದ ಕಲ್ಲು
ಜೋಡುಪಾಲ ಪ್ರಕೃತಿ ದುರಂತದ ಆತಂಕ: ಆಳವಾಗಿ ಕೊರೆದು, ವಜ್ರ ಗಣಿಗಾರಿಕೆ ಮಾಡಲಾಗುತ್ತಿದ್ದು, ಮುಂದೆ ಮಳೆಗಾಲ ಆರಂಭವಾದಾಗ ಮಳೆ ನೀರು ಹರಿದು ಜೋಡುಪಾಲ ಪ್ರಕೃತಿ ದುರಂತದಂತೆ ಬೆಟ್ಟಗುಡ್ಡಗಳು ಒಡೆದು ಜೀವಹಾನಿ ಸಂಭವಿಸಬಹುದೆಂಬ ಆತಂಕದಲ್ಲಿ ಸ್ಥಳೀಯವಾಗಿ ವಾಸವಿರುವ ಜನರಲ್ಲಿದೆ.
ಇಲಾಖೆಗಳು ಶಾಮೀಲು: ಸ್ಥಳೀಯವಾಗಿ ವಾಸವಿರುವ ಜನರು, ಕಾರ್ಮಿಕರನ್ನು ಮತ್ತು ದಂಧೆಯಲ್ಲಿ ಶಾಮೀಲಾಗಿರುವ ವ್ಯಕ್ತಿಗಳನ್ನು ಗಣಿಗಾರಿಕೆ ನಡೆಸದಂತೆ ಎಚ್ಚರಿಸಿದ್ದಾರೆ. ಅಲ್ಲದೆ ಸ್ಥಳೀಯ ಗ್ರಾಮಪಂಚಾಯಿತಿ, ಕಂದಾಯ ಇಲಾಖೆ, ಅರಣ್ಯ ಇಲಾಖೆಗೆ ಗಣಿಗಾರಿಕೆ ಬಗ್ಗೆ ಮಾಹಿತಿ, ದೂರುಗಳನ್ನು ನೀಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಕಂದಾಯ ಇಲಾಖೆಯ ಸಂಪಾಜೆ ಕಂದಾಯ ನಿರೀಕ್ಷಕ ಮತ್ತು ಅರಣ್ಯ ಇಲಾಖೆ, ಸ್ಥಳೀಯ ಗ್ರಾ.ಪಂ. ಸ್ಥಳಕ್ಕೆ ಭೇಟಿ ನೀಡುವ ಮೊದಲೇ ಲಕ್ಷಾಂತರ ಹಣ ನೀಡಿ ಕಳುಹಿಸಲಾಗುತ್ತಿದೆ. ಕಂದಾಯ ನಿರೀಕ್ಷಕರಿಗೆ ಮಾತ್ರ ಮೂರು ವರ್ಷಗಳಿಂದ ಲಕ್ಷಾಂತರ ಹಣ ನೀಡಿ, ಗಣಿಗಾರಿಕೆ ಪ್ರಕರಣವನ್ನು ಮುಚ್ಚಿಹಾಕಲಾಗುತ್ತಿದೆ ಎನ್ನುವ ಆರೋಪಗಳು ಸ್ಥಳೀಯವಾಗಿ ಕೇಳಿ ಬರುತ್ತಿದೆ.
ಕೂಡಲೇ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ಜನರು ಆಗ್ರಹಿಸುತ್ತಿದ್ದಾರೆ.

ಮೂರು ವರ್ಷಗಳಿಂದ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಸ್ಥಳೀಯವಾಗಿ ಬಹಳ ತೊಂದರೆಯಾಗುತ್ತಿದೆ. ಮುಂದೆ ಜೋಡುಪಾಲ ಪ್ರಕೃತಿ ದುರಂತದಂತೆ ಇಲ್ಲಿಯೂ ನಡೆಯಬಹುದೆಂಬ ಆತಂಕ ಎದುರಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು.
ಸ್ಥಳೀಯರು

ಪೆರಾಜೆ ಕುಂಡಾಡು ಪ್ರದೇಶದಲ್ಲಿ ಅಕ್ರಮ ವಜ್ರಗಣಿಗಾರಿಕೆಯಾಗುತ್ತಿರುವ ಮಾಹಿತಿ ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳನ್ನು ಕಳುಹಿಸಿ ವರದಿ ತೆಗೆದುಕೊಳ್ಳುತ್ತೇನೆ. ಮುಂದೆ ಸೂಕ್ತ ಕ್ರಮಕೈಗೊಳ್ಳುತ್ತೇನೆ.
ಅನ್ನೀಸ್ ಕನ್ಮಣಿ ಜಾಯ್, ಜಿಲ್ಲಾಧಿಕಾರಿಗಳು, ಕೊಡಗು

ವಜ್ರಗಣಿಗಾರಿಕೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿದ್ದರೆ ಸೂಕ್ತ ಕ್ರಮಕೈಗೊಳ್ಳುತ್ತೇನೆ.
ಜವರೇ ಗೌಡ, ಸಹಾಯಕ ಕಮಿಷನರ್, ಕೊಡಗು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.