ಕೆ.ಎಸ್.ಎಸ್. ಕಾಲೇಜಿನಲ್ಲಿ ಮೇಳೈಸಿದ ಶ್ರೀ ರಾಮಾಯಣ ದರ್ಶನಂ ರಂಗ ಪ್ರಸ್ತುತಿ

Advt_Headding_Middle
Advt_Headding_Middle

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣ ಮೈಸೂರು ಇದರ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ eನಪೀಠ ಪ್ರಶಸ್ತಿ ಪುರಸ್ಕೃತ ಮಹಾಕಾವ್ಯ ‘ಶ್ರೀ ರಾಮಾಯಣ ದರ್ಶನಂ’ ಎಂಬ ರಂಗ ಪ್ರಸ್ತುತಿ ಮಾ. 11ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಬಯಲು ರಂಗಮಂದಿರದಲ್ಲಿ ನಡೆಯಿತು. ಸುಳ್ಯದ ಕಲಾವಿದರಾದ ಗೀತಾ ಎಂ.ಎಸ್ ಮತ್ತು ಕೃಷ್ಣಕುಮಾರ್ ನಾರ್ಣಕಜೆಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಂಜುನಾಥ್ ಎನ್. ಭಟ್, ಕಾಲೇಜಿನ ಕುಸುಮ ಸಾರಂಗ ರಂಗ ಘಟಕದ ನಿರ್ದೇಶಕ, ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕರಾದ ಡಾ. ಗೋವಿಂದ ಎನ್.ಎಸ್, ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ರಂಗಯ್ಯ ಶೆಟಿಗಾರ್, ನಿವೃತ್ತ ದೈಹಿಕ ನಿರ್ದೇಶಕ ತುಕಾರಾಮ ಯೇನೆಕಲ್ಲು ರಂಗ ನಿರ್ದೇಶಕ ಎಂ.ಎಸ್. ಜಯಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಸುಮಾರು ೫ ಗಂಟೆಯಷ್ಟು ಹೊತ್ತು ನಡೆದ ಶ್ರೀ ರಾಮಾಯಣ ದರ್ಶನಂ ನಾಟಕ ಪ್ರೇಕ್ಷಕರ ಮನ ರಂಜಿಸುವಲ್ಲಿ ಯಶಸ್ವಿಯಾಯಿತು. ಪಾತ್ರಧಾರಿಗಳ ವಸ್ತ್ರ ವಿನ್ಯಾಸ, ಹಾವ ಭಾವ, ಮಾತುಗಾರಿಕೆ, ಬೆಳಕಿನ ವ್ಯವಸ್ಥೆ ಮತ್ತಿತರ ಪರಿಕರಗಳು ಪ್ರೇಕ್ಷಕರ ಗಮನ ಸೆಳೆಯಿತು. ಒಟ್ಟಾರೆ ನಾಟಕ ಅದ್ಬುತವಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.