ರಾತ್ರಿ ಸಮಯದಲ್ಲಿ ವಿದ್ಯುತ್ ಕಡಿತ ಬೇಡ: ಮನವಿ

Advt_Headding_Middle
Advt_Headding_Middle


ರಾತ್ರಿ ಸಮಯದಲ್ಲಿ ವಿದ್ಯುತ್ ಕಡಿತದಿಂದ ತೊಂದರೆಯಾಗುತಿದ್ದು, ಪರೀಕ್ಷಾ ಸಮಯಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡುವಬಗ್ಗೆ ಮೆಸ್ಕಾಂ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ದ.ಕ. ಜಿಲ್ಲೆಯಲ್ಲಿ ಇತರೆ ಯಾವುದೇ ತಾಲೂಕುನಲ್ಲಿ ಇಲ್ಲದೆ ಸುಳ್ಯದಲ್ಲಿ ತೀರ್ವವಾಗಿ ವಿದ್ಯುತ್ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯಗಳಲ್ಲಿ ಬಹಳ ತೊಂದರೆಯಾಗುತಿದ್ದು ಯಾವುದೇ ಮುನ್ಸೂಚನೆಗಳಿಲ್ಲದೆ ವಿದ್ಯುತ್ ಕೈಕೊಡುತ್ತಿದ್ದು ಯಾರೂ ಕೇಳದಂತಾಗಿದೆ. ಕೃಷಿಕರೂ, ವ್ಯಾಪಾರಸ್ಥರು ಬಹಳ ತೊಂದರೆ ಅನುಭವಿಸುತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನ ಹರಿಸಿ, ಇಲ್ಲದಿದ್ದರೆ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ಸಂಘಟಿಸಿ ಮೆಸ್ಕಾಂ ಮುಂದೆ ಧರಣಿ ಕುಳಿತುಕೊಳ್ಳುವ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚಲ್ಲಾಟವಾಡದೆ ಸುಳ್ಯದಲ್ಲಿ ವಿದ್ಯುತ್ ಸಮಸ್ಯೆಯನ್ನು ಪರಿಗಣಿಸಬೇಕಾಗಿ ಮನವಿಯಲ್ಲಿ ತಿಳಿಸಿದ್ದಾರೆ. ಆರ್ತಾಜೆ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ರಶೀದ್ ಪೈಚಾರ್, ಉಪಾಧ್ಯಕ್ಷ ಮುಜೀಬ್, ಕೋಶಾಧಿಕಾರಿ ಇಮ್ರಾನ್ ಮಿಲನ್, ಸದಸ್ಯ ಮಿಸ್ಬಾ ಪೈಚಾರ್, ಅಸ್ತ್ರ ಸ್ಪೋಟ್ಸ್ ಕ್ಲಬ್ ಸದಸ್ಯ ನಾಸಿರ್ ಕೆ.ಪಿ. ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.