ಕಡಮಜಲು ಕೃಷಿ ಕ್ಷೇತ್ರದಲ್ಲಿ ಸಮಗ್ರ ಕೃಷಿ ಅಧ್ಯಯನ ಮಾಹಿತಿ- ರೈತನಲ್ಲಿ ಪರಿಶ್ರಮ, ನಿರ್ವಹಣೆ ಗುಣ ಅಗತ್ಯ-ಸುಭಾಸ್ ರೈ

Advt_Headding_Middle
Advt_Headding_Middle

 ರೈತನಲ್ಲಿ ಪರಿಶ್ರಮ ಮತ್ತು ಕೃಷಿಯನ್ನು ನಿರ್ವಹಣೆ ಮಾಡುವ ಗುಣ ಇದ್ದರೆ ಮಾತ್ರ ಕೃಷಿ ಕ್ಷೇತ್ರದಲ್ಲಿ ಎತ್ತರಕ್ಕೇರಲು ಸಾಧ್ಯ ಎಂದು ವೈಜ್ಞಾನಿಕ ಗೇರು ಕೃಷಿಕ ಕಡಮಜಲು ಸುಭಾಸ್ ರೈ ಹೇಳಿದರು.
ಕಡಮಜಲು ಕೃಷಿ ಕ್ಷೇತ್ರದಲ್ಲಿ ವಿಜಯಾ ಬ್ಯಾಂಕ್ ಪ್ರವರ್ತಿತ ವಿಜಯಾ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ವಿಜಯಾ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರು ಇದರ ಆಶ್ರಯದಲ್ಲಿ ವಿಜಯಾ ಗ್ರಾಮಾಭಿವೃದ್ಧಿ ಸಮಿತಿ ಕೆದಂಬಾಡಿ ಇದರ ಸಹಕಾರದೊಂದಿಗೆ ಮಾ.೧೨ರಂದು ನಡೆದ ಸಮಗ್ರ ಕೃಷಿ ಅಧ್ಯಯನ ಮಾಹಿತಿ ಮತ್ತು ಸಂವಾದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಕೃಷಿಯನ್ನು ಪ್ರೀತಿಸಬೇಕು. ನಮ್ಮ ಬದುಕನ್ನು ರೂಪಿಸುವ ಶಿಲ್ಪಿ ನಾವಾಗಬೇಕು ಎಂದು ಅವರು ತಿಳಿಸಿದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಕುಂಬ್ರ ವಿಜಯಾ ಬ್ಯಾಂಕ್‌ನ ಕೃಷಿ ಅಧಿಕಾರಿ ಅಭಿಷೇಕ್‌ರವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಮಗ್ರ ಕೃಷಿ ಅಗತ್ಯವಿದ್ದು, ಇದರ ಬಗ್ಗೆ ಅಧ್ಯಯನ ಶಿಬಿರಗಳನ್ನು ನಡೆಸುವುದು ಸೂಕ್ತ ಎಂದರು.
ಕೌದಿ ಕೌಶಲ್ಯ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಗುತ್ತಿಗಾರು ಕಿಸಾನ್ ಸಂಘದ ಕಾರ್ಯದರ್ಶಿ ದೇವಿಪ್ರಸಾದ್ ಚಿಕ್ಮುಳಿಯವರು, ವಿಜಯ ಗ್ರಾಮಾಭಿವೃದ್ಧಿ ಸಮಿತಿಯ ಕೆಲಸವನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಯಶ್ವಿತ್ ಕಾಳಂಮನೆಯವರು ಮಾತನಾಡಿ, ಜಾಲ್ಸೂರು ವಿ.ಡಿ.ಸಿ.ಯಿಂದ ಕೃಷಿ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಕೃಷಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ ಎಂದರು.
ಗೌರವಾರ್ಪಣೆ: ಕೌದಿ ಕೌಶಲ್ಯ ತರಬೇತಿಯನ್ನು ನಡೆಸಿಕೊಟ್ಟ ಮನೋರಮ ಹಾಗೂ ಕಡಮಜಲು ಸುಭಾಸ್ ರೈ ಮತ್ತು ಪ್ರೀತಿ ಎಸ್. ರೈ ದಂಪತಿಯನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಸಾಹಿತಿ ಜಯಮ್ಮ ಚೆಟ್ಟಿಮಾಡುರವರು ಗೌರವಿಸಿದರು. ವೇದಿಕೆಯಲ್ಲಿ ನಾಲ್ಕೂರು ವಿ.ಡಿ.ಸಿ. ಕಾರ್ಯದರ್ಶಿ ದಿನೇಶ್ ಹಾಳೆಮನೆ ಉಪಸ್ಥಿತರಿದ್ದರು. ಸಭೆಯಲ್ಲಿ ಸುಳ್ಯ ಎ.ಪಿ.ಎಂ.ಸಿ. ಉಪಾಧ್ಯಕ್ಷ ಸಂತೋಷ್ ಜಾಕೆ ಉಪಸ್ಥಿತರಿದ್ದರು. ಸುಶ್ಮಿತಾ ಜಾಕೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕೆದಂಬಾಡಿ ವಿ.ಡಿ.ಸಿ. ಕಾರ್ಯದರ್ಶಿ ಕೃಷ್ಣಕುಮಾರ್, ರವೀಂದ್ರನಾಥ ರೈ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಕೆದಂಬಾಡಿ ವಿ.ಡಿ.ಸಿ. ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಅವರು ವಂದಿಸಿದರು. ಸುಮಾರು ೫೦ ಮಂದಿ ಭಾಗವಹಿಸಿದ್ದರು.
ಜಿ.ಪಂ.ಅಧ್ಯಕ್ಷರ ಭೇಟಿ: ಕಾರ್‍ಯಕ್ರಮವನ್ನು ಉದ್ಘಾಟಿಸಬೇಕಾಗಿದ್ದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡುರವರು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್‍ಯಕ್ರಮದ ಕೊನೆಯಲ್ಲಿ ಆಗಮಿಸಿ ಸಂಘಟಕರಿಂದ ಆತಿಥ್ಯ ಸ್ವೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.