ಸಂವಿಧಾನಕ್ಕೆ ಬದ್ಧರಾಗಿ ದೇಶ ರಕ್ಷಣೆಗಾಗಿ ಬಿಜೆಪಿ ಸೋಲು ಅನಿವಾರ್ಯ : ಎಂ.ಬಿ.ಸದಾಶಿವ

Advt_Headding_Middle
Advt_Headding_Middle

 

ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿ ದೇಶದ ಸಂವಿಧಾನ ಸುರಕ್ಷಿತವಾಗಿಲ್ಲ. ನಾವು ಸಂವಿಧಾನವನ್ನು ಬದಲಿಸಲೇ ಬಂದಿರುವವರು ಎಂದು ಮೋದಿ ಸರಕಾರದಲ್ಲಿ ಮಂತ್ರಿಯಾಗಿರುವ ವ್ಯಕ್ತಿಯೇ ಬಹಿರಂಗವಾಗಿ ಹೇಳುತ್ತಾರೆ. ಸಂವಿಧಾನದಿಂದ ಮಾತ್ರ ದೇಶದ ಆಡಳಿತ ಸಾಧ್ಯವಿಲ್ಲ ಎಂದು ಆರೆಸ್ಸೆಸ್ ನಾಯಕರು ಹೇಳುತ್ತಾರೆ. ಭಾರತ ದೇಶ ವಾಸಿಗಳಿಗೆ ಸಮಾನತೆಯ ಬದುಕುವ ಹಕ್ಕನ್ನು ರಕ್ಷಣೆಯನ್ನೂ ನೀಡಿರುವಂತಹ ಸಂವಿಧಾನದ ವಿರುದ್ಧವಾಗಿ ಚಿಂತಿಸುವ ಸಂಘಟನೆಗಳಿಗೆ ಸೇರಿದವರು ಆಡಳಿತ ನಡೆಸಿದರೆ ಜನಜೀವನ ದುರ್ಭರವಾಗಲಿದೆ. ಕಳೆದ 5 ವರ್ಷದ ಮೋದಿ ಆಡಳಿತದಲ್ಲಿ ಇದನ್ನು ನಾವು ಕಂಡಿದ್ದೇವೆ. ದೇಶದ ಜನರಿಗೆ ಕಷ್ಟ ಕೊಟ್ಟು, ಯುದ್ಧದ ಉನ್ಮಾದವನ್ನು ಸೃಷ್ಟಿಸಿ, ಅಧಿಕಾರ ಹಿಡಿಯಲು ಹೊರಟಿರುವ ಬಿಜೆಪಿಯನ್ನು ಸೋಲಿಸಲೇಬೇಕೆಂಬ ಉದ್ಧೇಶದಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಸ್ಪರ್ಧಿಸುತ್ತಿದ್ದೇವೆ. ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಹೇಳಿದ್ದಾರೆ. ಇಂದು ಸುಳ್ಯದಲ್ಲಿ ಪಕ್ಷದ ನೂತನ ಕಚೇರಿಯ ಉದ್ಘಾಟನೆಗೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

 

ಜಿಲ್ಲಾ ಜನತಾದಳದ ಅಧ್ಯಕ್ಷ ಮಹಮ್ಮದ್ ಕುಂಞಿ ವಿಟ್ಲ, ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಹೆಗ್ಡೆ, ಸುಳ್ಯ ತಾಲೂಕು ಘಟಕದ ಅಧ್ಯಕ್ಷ ದಯಾಕರ ಆಳ್ವ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಮಹಾಲಕ್ಷ್ಮಿ ಕೊರಂಬಡ್ಕ, ಜಿಲ್ಲಾ ಮಹಿಳಾ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಪ್ರೇಮಾನಂದ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.