ಎ.13-21 ರಂಗಮನೆಯಲ್ಲಿ ಚಿಣ್ಣರಮೇಳ , ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರ

Advt_Headding_Middle
Advt_Headding_Middle

ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.)ಇದರ ಆಶ್ರಯದಲ್ಲಿ,ಎಪ್ರಿಲ್ 13 ರಿಂದ 21 ರ ವರೆಗೆ ರಂಗನಿರ್ದೇಶಕ ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ ರಾಜ್ಯ ಮಟ್ಟದ ಮಕ್ಕಳ ಬೇಸಿಗೆ ಶಿಬಿರ ಚಿಣ್ಣರ ಮೇಳ -2019 ನ್ನು ಏರ್ಪಡಿಸಲಾಗಿದೆ.
ಸುಳ್ಯದಲ್ಲಿ ಜೀವನ್ ರಾಂ ನಿರ್ದೇಶನದ 27 ನೇ ವರ್ಷದ ಮಕ್ಕಳ ಶಿಬಿರ ಇದಾಗಿದ್ದು,ಈ ಶಿಬಿರದಲ್ಲಿ ನಾಡಿನ ಪ್ರಸಿದ್ಧ ಅನುಭವೀ ಸಂಪನ್ಮೂಲ ವ್ಯಕ್ತಿಗಳು ವೈವಿಧ್ಯಮಯ ವಿಷಯಗಳ ಬಗ್ಗೆ ತರಬೇತಿ ನೀಡಲಿದ್ದಾರೆ.
ಇದೇ ಸಮಯದಲ್ಲಿ ಜಾದೂ ಕಲಿಯಲು ಆಸಕ್ತಿ ಇರುವ ಮಕ್ಕಳಿಗೆ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ರವರು ಪ್ರತ್ಯೇಕವಾಗಿ ವಿಶೇಷ ಜಾದೂ ಕಾರ್ಯಾಗಾರ ವನ್ನು ನಡೆಸಿಕೊಡಲಿದ್ದಾರೆ.
ಪೂರ್ವಾಹ್ನ 9 ರಿಂದ ಸಂಜೆ 4.30 ರ ವರೆಗೆ ನಡೆಯುವ ಈ ಶಿಬಿರದಲ್ಲಿ ಜಾದೂ ಕಲಿಕೆ,ಮುಖವಾಡ ಹಾಗೂ ಗೊಂಬೆ ತಯಾರಿ,ಅಭಿನಯ ಗೀತೆ,ಕಥಾಭಿನಯ,ಕಿರು ನಾಟಕಗಳು,ಕ್ಲೇ ಮಾಡಲಿಂಗ್,ಉಬ್ಬು ಶಿಲ್ಪ,ರಂಗಗೀತೆ,ಕ್ರಾಫ್ಟ್, ಜನಪದ ಗೀತೆ, ಮನರಂಜನಾ ಆಟಗಳು,ಬೌದ್ಧಿಕ ಕಸರತ್ತಿನ ಪ್ರಶ್ನಾವಳಿ,ಮಾತುಗಾರಿಕೆ,
ವರ್ಲಿ ಕಲೆ,ಪ್ರಸಾಧನ,ಸೃಜನ ಶೀಲ ಕಲೆಗಳು ಸೇರಿದಂತೆ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಪೂರಾಕವಾದ ನೂರಾರು ಚಟುವಟಿಕೆಗಳು ಒಳಗೊಂಡಿರುತ್ತವೆ.
ಶಿಬಿರಾರ್ಥಿಗಳಿಗೆ ಊಟ,ಉಪಹಾರದ ವ್ಯವಸ್ಥೆ ಇದ್ದು
ಆಸಕ್ತರು ಮಾರ್ಚ್ 31 ಮತ್ತು ಎಪ್ರಿಲ್ 07 ರಂದು ರಂಗಮನೆಯಲ್ಲಿ ಅರ್ಜಿ ಪಡೆದು,ವಿವರಗಳೊಂದಿಗೆ ಹೆಸರು ನೊಂದಾಯಿಸಿಕೊಳ್ಳಬಹುದೆಂದೂ,ಹೆಚ್ಚಿನ ಮಾಹಿತಿಗಾಗಿ 9448215946( ಜೀವನ್ ರಾಂ),9448152172( ರವೀಶ್ ಪಡ್ಡಂಬೈಲ್),9448951859(ಸುಂದರ ಕೇನಾಜೆ),9449331602( ನಾಗೇಶ್ ರೈ) ಇವರನ್ನು ಸಂಪರ್ಕಿಸಬಹುದೆಂದು ರಂಗಮನೆ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ(9448502919) ವಿನಂತಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.