Breaking News

ಅಲೆಕ್ಕಾಡಿ : ಮೊಗೇರ್ಕಳ ನೇಮೋತ್ಸವ

Advt_Headding_Middle
Advt_Headding_Middle

ಮುರುಳ್ಯ ಗ್ರಾಮದ ಅಲೆಕ್ಕಾಡಿ ಶ್ರೀ ನಾಗಬ್ರಹ್ಮ ಮೊಗೇರ್ಕಳ ನೇಮೋತ್ಸವ ಸಮಿತಿ ವತಿಯಿಂದ ನಡೆಯುವ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ನೇಮೋತ್ಸವವು ಮಾ. 15 ರಂದು ನಡೆಯಿತು.

ಮಾ. 15 ರಂದು ಸಂಜೆ ಭಂಡಾರ ತೆಗೆದು ರಾತ್ರಿ 9 ಗಂಟೆಗೆ ಆದಿ ಮೊಗೇರ್ಕಳ ಗರಡಿ ಇಳಿದು, ರಾತ್ರಿ 1ಗಂಟೆಗೆ ತನ್ನಿಮಾನಿಗ ಗರಡಿ ಇಳಿದು, ಪ್ರಾತಃಕಾಲ 4 ಗಂಟೆಗೆ ಕೊರಗ ತನಿಯ ನೇಮ ನಡೆಯಿತು. ನಂತರ ಪೂಜಾರಿಗಳ ದರ್ಶನ ಸೇಟಾಗಿ ಹರಿಕೆ ಒಪ್ಪಿಸಿ, ಗಂಧ ಪ್ರಸಾದ ವಿತರಣೆ ನಡೆಯಿತು.


ಈ ಸಂದರ್ಭದಲ್ಲಿ ಗೌರವಾಧ್ಯಕ್ಷ, ಸ್ಥಳದಾನಿಗಳಾದ ಸುದೇಶ್ ರೈ, ಜನಾರ್ದನ ಪೂಜಾರಿ, ರಾಮಕೃಷ್ಣ ಪೂಜಾರಿ, ಕೃಷ್ಣಕುಮಾರ್, ಜಗನ್ನಾಥ ಪೂಜಾರಿ, ದಿನೇಶ್ ಅಮೀನ್, ಬಾಲಕೃಷ್ಣ ಗೌಡ ಕೊಳಂಬಳ, ನಾವೂರು ಬಾಲಕೃಷ್ಣ ಗೌಡ, ಶಿವಕುಮಾರ್, ಮೋಹನ್, ಉಮೇಶ್, ಲಿಂಗಪ್ಪ ಗೌಡ, ಜಯಪ್ರಕಾಶ್, ಚಂದ್ರಶೇಖರ, ಸೇವಾ ಸಮಿತಿ ಅಧ್ಯಕ್ಷ ರಾಘವೇಂದ್ರ, ನಾಗೇಶ್, ಬೈರ ನೂಜಾಡಿ, ಗುರುವ, ಮಾಣಿ ಮುಗೇರ, ಕರಿಯ ಪೊಡಂಬಡ್ಕ, ರವಿ ನೂಜಾಡಿ, ಚನಿಯ ಕಿನ್ಯಾಳ, ವಿಶ್ವನಾಥ ಅಲೆಕ್ಕಾಡಿ, ಐತ್ತಪ್ಪ ಅಲೆಕ್ಕಾಡಿ, ಹಾಗೂ ಸದಸ್ಯರು, ಊರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.